
ಸಕಲೇಶಪುರ :- ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಕಲು ಗ್ರಾಮವು ಸುಮಾರು 40 ದಲಿತ ಕುಟುಂಬಗಳಗೊಂಡಿದ್ದು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಊರಿನ ಯಾವುದೇ ಕಾರ್ಯಕ್ರಮಗಳಿಗೆ ನೆಂಟರು ಅಥವಾ ಸಂಬಂಧಿಗಳು ಮೂರರಿಂದ ನಾಲ್ಕು ಕಿಲೋಮೀಟರ್ ಕಾಲನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳ ಮೂಲಕ ಬರಬೇಕಾದಂತ ಪರಿಸ್ಥಿತಿ ಇತ್ತು. ಇನ್ನು ಊರಿನ ಗ್ರಾಮಸ್ಥರು ಮಳೆಗಾಲದಲ್ಲಿ ಯಾವುದೇ ಖಾಸಗಿ ವಾಹನಗಳು ಬರದೆ ಕಾಲ್ನಡಿಗೆಯಲ್ಲಿ ಮೂರರಿಂದ ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗುವಂತ ಪರಿಸ್ಥಿತಿ ಇತ್ತು. ದಲಿತ ಕುಟುಂಬಗಳಿರುವ ಈ ಗ್ರಾಮಕ್ಕೆ ಈ ಹಿಂದೆ ಅನೇಕ ಬಾರಿ ಶಾಸಕರ ಅಥವಾ ಸಂಸದರ ಅನುದಾನದಲ್ಲಿ ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಮನವೇ ಸಲ್ಲಿಸಿದ್ದರು ಪ್ರಯೋಜನವಾಗಿರಲಿಲ್ಲ.
ಈ ಗ್ರಾಮದ ಗಂಭೀರ ಸಮಸ್ಯೆಯ ಬಗ್ಗೆ ಪತ್ರಿಕೆಗಳ ಮೂಲಕ ಬೆಳಕು ಕೆಲಸವನ್ನು ಪತ್ರಕರ್ತರು ಮಾಡಿದ್ದರು. ಈ ಸಮಸ್ಯೆಗೆ ಅಧಿಕಾರಿಗಳು ಹಾಗೂ ಶಾಸಕರು ಸ್ಪಂದಿಸಿ ಒಂದು ಕೋಟಿಯ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗುವಂತೆ ಮಾಡಲಗಿತ್ತು. ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಸಕಲೇಶಪುರ ಕ್ಕೆ ಬಂದು ತಮ್ಮ ಪತ್ರಿಕೆಗಳ ಮೂಲಕ ಸಮಸ್ಯೆ ಬಿತ್ತರಿಸಿದ ” ಭೀಮಾ ವಿಜಯ” ಪತ್ರಿಕೆಯ ವರದಿಗಾರರಾದ ಜೈ ಭೀ ಮಂಜುನಾಥ್, “ಸಂಯುಕ್ತ ಕರ್ನಾಟಕ” ವರದಿಗಾರರಾದ ನವೀನ್ ಶೆಟ್ಟಿ, “ಮಲೆನಾಡು ಟಿವಿ 46 “ತಾಲೂಕು ವರದಿಗಾರರಾದ ರಮೇಶ್ ಹಾಗೂ” ವೈಚಾರಿಕ “ದಿನಪತ್ರಿಕೆಯ ತಾಲ್ಲೂಕು ವರದಿಗಾರರಾದ ಅರುಣ್ ಗೌಡ ಕರಡಿಗಾಲ,ರಿಗೆ ಸನ್ಮಾನ ಮಾಡುವುದರೊಂದಿಗೆ ಗೌರವ ಸಮರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕರ್ತ ಸಂಘದ ಅಧ್ಯಕ್ಷರಾದ ಜೈ ಭೀಮ್ ಮಂಜು ಅವರು ” ಮೂಲಭೂತ ಸೌಕರ್ಯಗಳ ವಂಚಿತವಾದ ಗ್ರಾಮದ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆ ಮೂಲಕ ಪ್ರಕಟಿಸಿ ಅಧಿಕಾರಿಗಳ ಗಮನ ತರುವಲ್ಲಿ ಪ್ರಯತ್ನ ಪಟ್ಟ ಪತ್ರಕರ್ತರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಸ್ಲಾಘನೆಯ ವಿಷಯ. ಈ ತರಹ ಪತ್ರಕರ್ತರಿಗೆ ಪ್ರೋತ್ಸಾಹಿಸುವುದು ಪತ್ರಕರ್ತರು ಇನ್ನಷ್ಟು ತಮ್ಮ ಕೆಲಸದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ತಡಕಲು ಶಿವಕುಮಾರ್, ಗ್ರಾಮಸ್ಥರಾದ ಸುರೇಶ್, ಜಯಣ್ಣ,ಈರಯ್ಯ, ಲಿಂಗರಾಜ್, ಕೋಮರಯ್ಯ ದಯಾನಂದ, ಪ್ರದೀಪ್, ಸುಬ್ರಮಣಿ, ಲೋಕೇಶ್, ಜಯಪ್ಪ ಹೊಸೂರು, ರಂಜನ್, ಉಮೇಶ್ ಉಪಸ್ಥಿತರಿದ್ದರು.
