ಆಲೂರು : ಪಟ್ಟಣದ ಕೆ ಇ ಬಿ ವೃತ್ತದಲ್ಲಿ ರಾಷ್ಟ ರಕ್ಷಣೆಗಾಗಿ ನಾಗರಿಕರ ಸಮಿತಿ ವತಿಯಿಂದ ಭಾರತೀಯ ಸೈನಿಕರು ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿಸಿದರ ಅಂಗವಾಗಿ ಹಮ್ಮಿಕೊಂಡ ತಿರಂಗ ಯಾತ್ರೆಯನ್ನು ಸದಾಶಿವಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು

ಭಾರತ ದೇಶದಲ್ಲಿನ ಪ್ರತಿಯೊಬ್ಬರು ಕೂಡ ಜಾತಿ,ಧರ್ಮ,ಪಂಥ,ಮತ,ಬೇದ ಭಾವವಿಲ್ಲದೆ ನಾವೇಲ್ಲರು ಭಾರತೀಯರು ಎನ್ನುವ ಮನಸ್ಥತಿಯನ್ನು ಬೆಳಿಸಿಕೊಂಡಾಗ ಮಾತ್ರ ದೇಶ ಸುರಕ್ಷಿತವಾಗಿರುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ದೇಶದೊಳಗಿರುವ ಸಮಾಜ ಘಾತುಕ ಮನಸ್ಥತಿಯವರನ್ನು ,ಸಮಾಜ ಘತಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರ ಇದು ಭಾರತ ಮಾತೆಯ ಸಿಂಧೂರ ಪ್ರಾಣ ಕೊಟ್ಟಿವೆ ಹೋರೆತು ಬಿಡುವುದಿಲ್ಲವೆಂದು ತಿಳಿಸಿದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ಕಾಶ್ಮೀರದಲ್ಲಿನ ಪೆಹಲ್ಗಾಮ್ ನಲ್ಲಿ ನೇರೆಯ ದೇಶದ ಉಗ್ರರು ಜಾತಿಯನ್ನು ಕೇಳಿ 27 ಮಂದಿ ನಾಗರಿಕರನ್ನು ಹತ್ತೆ ಮಾಡಿದರ ಪ್ರತಿಕಾರವಾಗಿ ನಮ್ಮ ದೇಶದ ಸೈನಿಕರಿಂದ ನಡೆದ ಅಪರೇಶನ್ ಸಿಂಧೂರ್ ಯಶಸ್ವಿಯಾಗಿ ನಡೆಸಿ ಸರಿಯಾದ ಉತ್ತರ ನೀಡಿದ್ದಾರೆ. ಕಾರ್ಯಚಾರಣೆಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಿರಂಗ ಯಾತ್ರೆಯು ಕೆ ಇ ಬಿ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ವೀರಶೈವ ಕಲ್ಯಾಣ ಮಂಟಪದವರೆಗೆ ನಡೆದು ಮುಕ್ತಯವಾಯಿತು.

ವಿವಿಧ ಕಾಲೇಜ್ ವಿದ್ಯಾರ್ಥಿಗಳು ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ಅಕರ್ಷಕವಾಗಿ ಸಾಗಿದರು.ಈ ತಿರಂಗಯಾತ್ರೆಯಲ್ಲಿ ಸೈನಿಕರು ಮಾಜಿ ನಿವೃತ್ತ ಸೈನಿಕರು ಹಾಗೂ ಮಹಿಳೆಯರು ಸೇರಿ ಸಾರ್ವಜನಿಕರು ವಿವಿಧ ಕಾಲೇಜು ವಿದ್ಯಾರ್ಥಿಗಳಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *