ಬೇಲೂರು: ಕೆಲಸ ಮಾಡುವ ವೇಳೆಯಲ್ಲಿ ಕಾಡಾನೆ ಅಟ್ಯಾಕ್ .ವ್ಯಕ್ತಿ ಪ್ರಾಣಾಪಾಯದಿಂದ ಪಾರು.

ಕಾಫಿ ತೋಟದಲ್ಲಿ ಕಂಡು ಬಂದ ಕಾಡಾನೆ ಕಂಡು ಮರವೇರಿದ ಕಾಫಿತೋಟದ ಮಾಲೀಕ

ಬೇಲೂರು ತಾಲೂಕು ಕೋಗೋಡು ಗ್ರಾಮದ ಹಳೇ ಊರಿನಲ್ಲಿ ಈ ಘಟನೆ ನಡೆದಿದೆ.

ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಡಾನೆ ದಾಳಿಯಿಂದ ಮಾಲೀಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.

ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಡಾನೆಯೊಂದು ನಡೆದುಕೊಂಡು ಬರುತ್ತಿದದ್ದನ್ನು ಗಮನಿಸಿದ ಯೊಗೇಶ್ ಮಗ ಮಹೇಶ್ ತನ್ನ ತಂದೆಗೆ ಆನೆ ಬರುತ್ತಿದೆ ಬೇಗ ತಪ್ಪಿಸಿಕೊಳ್ಳಿ ಎಂದು ಕೂಗಿ ಹೇಳಿದ್ದಾನೆ‌.

ಈ ಮಾತು ಕೇಳಿಸಿಕೊಂಡ ತಂದೆ ಯೊಗೇಂದ್ರ ಕೂಡಲೆ ಮರವೇರಿ ಆನೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಯದಿಂದ ಪಾರಾಗಿದ್ದಾರೆ.

ಇತ್ತಿಚಿಗೆ ಮಾನವ ಹಾಗು ಆನೆಗಳ ಸಂಘರ್ಷ ವಿಪರೀತವಾಗಿದ್ದು ಕೂಡಲೆ ಆನೆಗಳನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *