
ಹಾಸನ : ಇಂದು ವಿಶ್ವ ಪರಿಸರ ದಿನದ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ರೋಟರಿ ಕ್ಲಬ್ ಆಫ್ ಹಾಸನ್ ಸೆಂಟ್ರಲ್ ರವರ ಸಹಯೋಗದಲ್ಲಿ ಬೆಳಿಗ್ಗೆ 7-15 ಗಂಟೆಗೆ ಹಾಸನ ನಗರದ ಎಸ್.ಎಂ.ಕೃಷ್ಣ ನಗರ ಬಡಾವಣೆಯ ರಾಷ್ಟ್ರೋತ್ಥಾನ ವಿದ್ಯಾ ಶಾಲೆಯ ಮುಂಭಾಗ ಇರುವ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಸುಮಾರು 50 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷರಾದ ರೋ!! ಭುವನೇಶ್, ರೋಟರಿ ಕ್ಲಬ್ ಆಫ್ ಹಾಸನ್ ನ ಅಧ್ಯಕ್ಷರಾದ ನಾಗೇಶ್ ರವರು, ಹಾಗೂ ಎರಡು ಕ್ಲಬ್ ನ ರೋಟರಿಯೆನ್ ಗಳು, ಯೋಗಾ ಗುರು ಚೇತನ್ ಗುರೂಜಿ ರವರು, ಹಾಗೂ ಎಸ್.ಎಂ.ಕೆ ನಗರ ಬಡಾವಣೆಯ ನಾಗರೀಕರುಗಳು ಹಾಜರಿದ್ದರು.
ಈ ಕಾರ್ಯಕ್ರಮ ಯಶಸ್ವಿ ಆಗಲು ಸಹಕಾರ ನೀಡಿದ ಎಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇಂತಿ : ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ರೋಟರಿ ಕ್ಲಬ್ ಆಫ್ ಹಾಸನ್ ಸೆಂಟ್ರಲ್.

