ಹೆತ್ತೂರು : ದಿನಾಂಕ 6.6.2025 ಶುಕ್ರವಾರ ಶಾರದಾ ಪೂಜೆ ಮತ್ತು ಶಾಲಾ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮವು ಸತ್ಯಮೂರ್ತಿ ಅರ್ಚಕರಿಂದ ಶಾರದಾ ಪೂಜೆಯನ್ನು ಮಾಡುವುದರ ಮೂಲಕ ಮೊದಲುಗೊಂಡು ನಂತರ ಮಕ್ಕಳ ಅಕ್ಷರಭ್ಯಾಸದೊಂದಿಗೆ ಮುಂದುವರೆಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ಸಚಿನ್ ರವರು ಮತ್ತು ಶಾಲಾ ಮುಖ್ಯೋಪಾಧ್ಯರಾದ ಸತೀಶ್ ರವರು ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ತೇಜಸ್ವಿನಿ ಮತ್ತು ಸುನಂದ ಹಾಗೂ ಅಡುಗೆ ಸಿಬ್ಬಂದಿ ಶ್ರೀಮತಿ ರತ್ನ , ಶಿಕ್ಷಕ ಸಹಾಯಕಿ ಸವಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಸದಸ್ಯರುಗಳಾದ ಶರತ್ ಕೂಡು ರಸ್ತೆ, ಹರೀಶ್ ಕರಡಿಗಾಲ, ರತನ್ ಅತ್ತಿಗನಹಳ್ಳಿ ಮತ್ತು ಸುಶ್ಮಿತಾ ಹೆತ್ತೂರು ಭಾಗವಹಿಸಿದುದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದಿತ್ತು.

ಪುಟಾಣಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಮತ್ತು ಶಿಕ್ಷಣದಲ್ಲಿ ಶ್ರದ್ಧೆ ಮತ್ತು ಭಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪೋಷಕರು ತಮ್ಮ ಮಕ್ಕಳನ್ನು ಉತ್ತಮ ರೀತಿಯ ಸಾಂಪ್ರದಾಯಿಕ ಉಡುಗೆಯಲ್ಲಿ ಕರೆತಂದಿದ್ದು ಕಾರ್ಯಕ್ರಮದ ಸೊಬಗನ್ನು ಇಮ್ಮಡಿಗೊಳಿಸಿತು. ಈ ಮೂಲಕ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರ ಒಲವು ಎಷ್ಟಿದೆ ಎಂಬುದನ್ನು ಸಾಕ್ಷಿಕರಿಸಿದಂತಾಯಿತು.

ಶಾಲೆಯ ಪರವಾಗಿ ಮತ್ತು ಎಲ್ಲಾ ಎಸ್‌ಡಿಎಂಸಿ ಸದಸ್ಯರ ಪರವಾಗಿ ಮಕ್ಕಳಿಗೆ ಶುಭಕೋರಿ ಬರಮಾಡಿಕೊಳ್ಳಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *