
ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಇದುವರೆಗೆಒಟ್ಟು ನಾಲ್ವರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಹೃದಯಾಘಾತದಿಂದ ನಿಧನ ಹೊಂದಿದ ಐವರು ಹಾಸನ ಜಿಲ್ಲೆಯ ಮೂಲದವರೇ ಆಗಿದ್ದಾರೆ.ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ನಿಧನ. ಬೆಂಗಳೂರಿನ ಜೆಪಿ ನಗರದಲ್ಲಿ ನಿಶಾಂತ್ ಸಾವನ್ನಪ್ಪಿದ್ದಾರೆ. ಡಿಪ್ಲೋಮಾ ವ್ಯಾಸಂಗ ಮಾಡಿ ಮುಗಿಸಿದ್ದ ನಿಶಾಂತ್ ಅವರು ಕೈಗಾರಿಕಾ ತರಬೇತಿ ಸಲುವಾಗಿ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದುಕೊಂಡಿದ್ದರು.
ಇವತ್ತು ರೂಮ್‌ನಲ್ಲಿ ಇರುವಾಗ ಎದೆನೋವು ಕಾಣಿಸಿದೆ. ಕೆಲವೇ ಕ್ಷಣದಲ್ಲೇ ತೀವ್ರವಾದ ಹೃದಯಾಘಾತದಿಂದ ಯುವಕ ಕೊನೆಯುಸಿರೆಳೆದಿದ್ದಾನೆ. ಬೆಳಗ್ಗೆ 10 ಗಂಟೆ ಆದರೂ ರೂಮ್ ಬಾಗಿಲು ಓಪನ್ ಮಾಡದ ಕಾರಣ ಸ್ನೇಹಿತರು ಹಾಗೂ ಅಕ್ಕಪಕ್ಕದವರು ಬಾಗಿಲು ತೆಗೆದು ಒಳಗೆ ಹೋದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.ಮೃತದೇಹ ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ರವಾನೆ…ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರು ಹಾಸನಕ್ಕೆ ಮೃತದೇಹವನ್ನು ಕೊಂಡೊಯ್ಯಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯುವಕನ ತಾಯಿ ನಿಧನ ಹೊಂದಿದ್ದರು.
