
ಹಾಸನ: ಹೃದಯಾಘಾತದಿಂದ ಇತ್ತೀಚೆಗಷ್ಟೇಜಿಲ್ಲೆಯಲ್ಲಿ ಮೂವರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಯುವಕನೋರ್ವ ಹೃದಯಾಘಾತ ನಿಧನ ಹೊಂದಿದ್ದಾನೆ.
ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತದಿಂದ ನಿಧನ ಹೊಂದಿದವರು.
ಹಸುಗಳಿಗೆ ಹುಲ್ಲು ತರಲೆಂದು ಯುವಕನು ಹೊಲಕ್ಕೆ ಹೋಗಿದ್ದನು. ಈ ವೇಳೆ ಹೊಲದಲ್ಲೇ ಯುವಕನಿಗೆ ಎದೆ ನೋವು ಕಾಣಿಸಿದೆ. ಇದರಿಂದ ಹೊಲದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.
ಗ್ರಾಮದ ನಿವಾಸಿಯಾದ ನಂಜುಡಪ್ಪ, ಪಾರ್ವತಮ್ಮ ದಂಪತಿಯ ಏಕೈಕ ಪುತ್ರನಾಗಿದ್ದ ನವೀನ್ ಕಣ್ಮುಚ್ಚಿದ್ದಾನೆ.
ಮನೆಯಲ್ಲಿ ನೀರವ ಮೌನ ಆವರಿಸಿದ್ದು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತಂದೆ, ತಾಯಿ ಹಾಗೂ ಅಜ್ಜ, ಅಜ್ಜಿಯನ್ನು ನವೀನ್ ಕುಮಾರ್ ಅಗಲಿದ್ದಾರೆ.
