ಸಕಲೇಶಪುರ :- ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ಶಾಲೆಯಲ್ಲಿ 2025 -26 ನೇ ಸಾಲಿನ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಎಲ್.ಕೆ.ಜಿ ಗೆ ಹೊಸದಾಗಿ ದಾಖಲಾದ 25 ವಿದ್ಯಾರ್ಥಿಗಳಿಗೆ ಪುರೋಹಿತರಾದ ಶಂಕ್ರಯ್ಯ ಅವರ ನೇತೃತ್ವದಲ್ಲಿ ಸರಸ್ವತಿ ಹಾಗೂ ಗಣೇಶ ಫೋಟೋಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಪೋಷಕರ ಸಮ್ಮುಖದಲ್ಲಿ ಅಕ್ಷರ ಅಭ್ಯಾಸ ಮಾಡಿಸಲಾಯಿತು.

ಪೋಷಕರೊಂದಿಗೆ ತಟ್ಟೆಯಲ್ಲಿ ಅಕ್ಕಿ ಹಾಕಿ ಅರಿಶಿಣ ಕೊಂಬು ಜೊತೆ ಓಂ ಹಾಗೂ ಶ್ರೀ ಬರೆಸುವ ಮೂಲಕ ಅಕ್ಷರ ಅಭ್ಯಾಸ ಕಾರ್ಯಕ್ರಮ ಮಾಡಲಾಯಿತು.

ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು , ಶಾಲೆಯ ಮುಖ್ಯ ಅಧ್ಯಾಪಕರು , ಶಿಕ್ಷಕವೃಂದ ಹಾಗು ಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *