
ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯತಿಯಲ್ಲಿ ಗುರುವಾರ ಮಹಿಳಾ ಗ್ರಾಮಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದ ಅಂಗವಾಗಿ 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕಗಳಿಸಿದ ಪಂಚಾಯಿತಿ ವ್ಯಾಪ್ತಿಯ ರಿತೇಶ್, ಸಂಜೀವಿತ, ಸಂಗೀತ, ಶೀತಲ್ ಜಿ ಎಸ್, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸಾಧಕಿಯರಾದ ಸುಮನ ಜಯಪ್ರಕಾಶ್, ಸುಲೋಚನಾ ರಾಮಕೃಷ್ಣ, ಈರಮ್ಮ ಕೊಂ ಸಿದ್ದಯ್ಯ, ಲೋಹಿತಕುಮಾರಿ ಮತ್ತು ಯಾಸ್ಮಿನ್ ರಿಯಾಜ್ ಇವರುಗಳನ್ನು ಗ್ರಾಮ ಪಂಚಾಯಿತಿವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಬಾಷಣಕಾರರಾದ ಸುಮನಾ ಜಯಪ್ರಕಾಶ್ ರವರು ಮಹಿಳೆಯ ಸ್ಥಾನಮಾನದ ಬಗ್ಗೆ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯ ಪಾತ್ರದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಸವಿತಾ ವೈದ್ಯಾಧಿಕಾರಿಗಳು ಬೆಳಗೋಡು ರವರು ಕಾರ್ಯಕ್ರಮ ಉಧ್ಘಾಟಿಸಿ ಮಹಿಳೆಯ ಶುಚಿತ್ವ ಮತ್ತು ತಮ್ಮ ಹಾಗೂ ಕುಟುಂಬದ ಆರೋಗ್ಯದ ಕಡೆ ಗಮನಹರಿಸುವಂತೆ ಕಿವಿಮಾತು ಹೇಳಿದರು.
ರೇಖಾ ಗೋಪಿನಾಥ್ ಅಧ್ಯಕ್ಷರು ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಕುರಿತು ನಾನು ಕೇವಲ ಕುಟುಂಬದ ನಾಲ್ಕು ಗೋಡೆ ಮದ್ಯೆ ಕೆಲಸ ನಿರ್ವಹಿಸುತ್ತಿದ್ದೆ. ನನ್ನನ್ನು ಹಿಂದಿನ ಚುನಾವಣೆಯಲ್ಲಿ ಗುರುತಿಸಿ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಲು ಸಹಕರಿಸಿದ ರಾಮಕೃಷ್ಣ ರವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಇವತ್ತಿನ ಕಾರ್ಯಕ್ರಮನ್ನು ಯಶ್ವಸ್ವಿಯಾಗಿ ನಡೆಸಿಕೊಟ್ಟಂತಹ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಸಲ್ಲಿಸಿದರು.
ಇದೇ ಕಾರ್ಯಕ್ರಮದಲ್ಲಿ ಬಾಗೆ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗಾಡ್ರೇಜ್ ಬೀರು ಹಾಗೂ ಹಳೇಬಾಗೆ ಅಂಗನವಾಡಿಗೆ ಚೇರು ಟೇಬಲ್ ಫ್ಯಾನ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಜೈ ಶಂಕರ್, ಶ್ರೀನಿವಾಸ್, ರಮೇಶ್, ಸವಿತಾ, ವನಜಾಕ್ಷಿ, ಮೋಹಿನಿ, ಗಿರಿಜಮ್ಮ ಹಾಗೂ ಮಾಜಿ ಅಧ್ಯಕ್ಷರು ಸದಸ್ಯರುಗಳು ಹಾಜರಿದ್ದರು. ಮತ್ತು ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀ ಚಿನ್ನಸ್ವಾಮಿ ರವರು , ಕಾರ್ಯದರ್ಶಿ ಜಯಪ್ರಕಾಶ್ , ಹಾಗೂ ಪಂಚಾಯಿತಿ ಸಿಬ್ಬಂಧಿ ವರ್ಗದವರು ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.



