
ಬೇಲೂರು : ತಾಲೂಕು ಅರೇಹಳ್ಳಿ ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅರೇಹಳ್ಳಿ ಹಾಗೂ ದೋಲನಮನೆ ರಸ್ತೆಯಲ್ಲಿರುವ ಚೆಕ್‌ಡ್ಯಾಂ ತುಂಬಿ ಹರಿಯುತ್ತಿದೆ. ಹಸಿರು ಗುಡ್ಡದ ಬಳಿ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವುಂಟಾಗಿದೆ.
ಹಗಲು ವೇಳೆ ಕಡಿಮೆ ಇದ್ದ ಮಳೆ ರಾತ್ರಿ ವೇಳೆ ಧಾರಾಕಾರವಾಗಿ ಸುರಿಯುತ್ತಿದೆ. ಜೋರು ಗಾಳಿ ಬೀಸುತ್ತಿರುವುದರಿಂದ ಕೂಲಿ ಕಾರ್ಮಿಕರು ಕಾಫಿ ತೋಟಗಳಿಗೆ ತೆರಳಲು ಭಯಪಡುತ್ತಿದ್ದಾರೆ.
ಅರೇಹಳ್ಳಿ, ನಾರ್ವೆ, ಮಲಸಾವರ, ಬಿಟ್ಟೇಶ್ವರ, ನಲ್ಕೆ, ಕಣಗುಪ್ಪೆ , ಅನುಘಟ್ಟ ಗ್ರಾಮಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಖಂಡರುಗಳು, ಗ್ರಾಮಸ್ಥರು ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಶ್ರಮ ಪಡುತ್ತಿದ್ದಾರೆ.
ಈ ವೇಳೆ ಕಾಂಗ್ರೆಸ್ ಕಿಸಾನ್ ಖೇತ್ ರಾಜ್ಯ ಸಂಚಾಲಕ ತುಳಸಿದಾಸ್ ಹಾಗೂ ಇನ್ನಿತರರು ಇದ್ದರು.
