ಹಾಸನ :- ಇಂದು ಮಲೆನಾಡು ರಕ್ಷಣಾ ಸೇನೆ ಹಾಸನ ಜಿಲ್ಲಾ ಘಟಕದ ವತಿಯಿಂದ ಹಾಸನ ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಸನ ಮಲೆನಾಡು ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ದರ್ಶನ್ ಮಲ್ನಾಡ್ ರವರು ಹಾಸನ ನಗರದಲ್ಲಿ ಹಲವಾರು ವರ್ಷಗಳಿಂದ ಹಾಸನ ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶ ಹಾಗೂ ಪರಿಸರದ ಕಾಳಜಿಯಿಂದ ಸ್ವಚ್ಛ ಭಾರತ್ ಮಿಷನ್ ಹಾಗೂ ಹಲವಾರು ಯೋಜನೆಗಳ ಮುಖಾಂತರ ಹಾಸನದ ಪ್ರಮುಖ ರಸ್ತೆಗಳು ಹಾಗೂ ಹಾಸನ ನಗರ ಬಡಾವಣೆಯ ರಸ್ತೆಗಳಲ್ಲಿ ಸಾಲುಮರಗಳನ್ನು ನೆಟ್ಟಿದ್ದು ಈ ಒಂದು ಗಿಡಗಳ ರಕ್ಷಣೆಗೆ ರಕ್ಷಣಾ ಬೆಲಿಯನ್ನು ಹಾಕಲಾಗಿತ್ತು

ಆ ಮರಗಳು ಈಗ ಹೆಮ್ಮರವಾಗಿ ಬೆಳೆದಿದ್ದು ಆ ರಕ್ಷಣೆ ಬೇಲಿಗಳು ಮರದ ಬುಡ ಕಾಂಡದ ಒಳಗೆ ಸೇರಿಕೊಂಡಿದ್ದು ಮರದ ಬೆಳವಣಿಗೆಗೆ ತೊಂದರೆಯಾಗುತ್ತಿದ್ದು ಈ ಒಂದು ತಡೆ ರಿಂಗು ಗಳನ್ನು ತೆರವು ಮಾಡಿಕೊಡಬೇಕೆಂದು ಇಂದು ಹಾಸನ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು .

ನಮ್ಮ ಮನವಿಗೆ ಸ್ಪಂದಿಸಿದ ಆಯುಕ್ತರು ಅತಿ ಶೀಘ್ರದಲ್ಲಿ ತೆರವು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿರುತ್ತಾರೆ ಈ ಒಂದು ಸಂದರ್ಭದಲ್ಲಿ ಸಂಘಟನೆಯ ಕಾರ್ಯಕಾರಿ ಮಂಡಳಿಯ ಅವಿನಾಶ್ ಜಿ.ಎಸ್. ಪಾಲಾಕ್ಷ.ಯತೀಶ್ ಕುಮಾರ್ ಶೆಟ್ಟಳ್ಳಿ. ಪವನ್ ಕಾಗಿನಾರೆ. ರಾಕೇಶ್ ಗೌಡ. ಶರತ್ ಶೆಟ್ಟಿ.ಮುಂತಾದವರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *