
ಸಕಲೇಶಪುರ: ಪಟ್ಟಣದ ಸಾರ್ವಜನಿಕ ಶೌಚಾಲಯದ ತೊಟ್ಟಿ ತುಂಬಿ, ತ್ಯಾಜ್ಯ ಹೊರಗೆ ಹರಿಯುತ್ತಿದ್ದರೂ, ಪುರಸಭೆ ಕ್ರಮ ಕೈಗೊಳ್ಳದಿರುವ ಪರಿಣಾಮ, ಹಳೆ ಬಸ್ ನಿಲ್ದಾಣದ ಪಾರ್ಕಿಂಗ್‌ನಂತಹ ಪ್ರಮುಖ ಪ್ರದೇಶ ಗಬ್ಬು ನಾರುತ್ತಿದೆ.
ಸಕಲೇಶಪುರ ಎಂದಾಕ್ಷಣ, ಎಲ್ಲರ ಮನಸ್ಸಿನಲ್ಲಿ ಮೂಡುವ ಕಲ್ಪನೆ ಸುಂದರವಾದ ದೈವದತ್ತ ಪರಿಸರವೇ ಆಗಿದೆ. ಎಂದು ಆದರೆ, ಇಲ್ಲಿ ಕಲ್ಪನೆಯಂತೆ ಏನೂ ಇಲ್ಲ. ಪಟ್ಟಣದ ಏಕೈಕ ಸಾರ್ವಜನಿಕ ಶೌಚಾಲಯದ ಸುತ್ತಮುತ್ತ ಗಬ್ಬು ನಾರುತ್ತಿದೆ.
ಈ ಅವ್ಯವಸ್ಥೆಯನ್ನುಕೂಡಲೇ ಪುರಸಭೆಯ ಅಧಿಕಾರಿಗಳು ಶೌಚಾಲಯದ ತ್ಯಾಜ್ಯವನ್ನು ಸ್ವಚ್ಛಗೊಳಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ವತಿಯಿಂದ ಪುರಸಭೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ಗಗನ್ ಹಾಡ್ಲಹಳ್ಳಿ ಎಚ್ಚರಿಕೆ ನೀಡಿದ್ದಾರೆ.




