ಸಕಲೇಶಪುರ : ದಿನಾಂಕ 17.06.2025ರ ಮಂಗಳವಾರ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು.

ವಾರ್ಷಿಕ ಸಭೆಯ ನಂತರ ಸಂಘದ ಮುಂದಿನ ಅವಧಿಗೆ ಅಧ್ಯಕ್ಷರನ್ನು ಚುನಾವಣೆ ಮೂಲಕ ನಡೆಸಲಾಯಿತು .

ಚುನಾವಣೆಯಲ್ಲಿ ಮೂರು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅಧಿಕ ಮತ ಪಡೆದ ಬಿ ಎಸ್ ಪ್ರೇಮ್ ನಾಥ್ ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಸಭೆಯ ನಂತರ ಮಾತಾಡಿದ ನೂತನ ಅಧ್ಯಕ್ಷರು ಅಧ್ಯಕ್ಷರು ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಸಂಘವನ್ನು ಉತ್ತಮ ಮಟ್ಟಿಗೆ ಕಾರ್ಯ ನಿರ್ವಹಿಸಲು ಸಹಕಾರ ನೀಡಬೇಕಾಗಿ ಕೇಳಿಕೊಂಡರು

ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಗಿರೀಶ್ ಮಂಜು, ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ ಕಾರ್ಯದರ್ಶಿ ಪ್ರವೀಣ್ ಖಜಾಂಚಿ ಸೋಮಶೇಖರ್ ಸಂಘದ ಹಿರಿಯ ಸದಸ್ಯರ ಆನಂದ್ ಲಿಯೋ ವಾಸ್ , ಮೋಹನ್ ಕುಮಾರ್, ಧನಂಜಯ ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *