
ಸಕಲೇಶಪುರ : ತಾಲ್ಲೂಕಿನ ಹಾರ್ಲೆ ಕೂಡಿಗೆ,ಯಸಳೂರು ಹೋಬಳಿಯ ಕೆಲವು ಹಳ್ಳಿ ಗಳಲ್ಲಿ ಓವರ್ ಲೋಡ್, ಪವರ್ ಕಟ್, ಜಂಪರ್ ಕಟ್ ಹೀಗೆ ವಿದ್ಯುತ್‌ಗೆ ಸಂಬಂಧಿಸಿ ಹಲವು ಪ್ರಶ್ನೆಗಳಿಗೆ ಪರಿಹಾರ ಸಿಗಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಳವಡಿಸಿದ್ದ ನೂತನ ವಿದ್ಯುತ್ ಪರಿವರ್ತಕಗಳನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಐದು ಹೋಬಳಿಗಳಲ್ಲಿ ಲೋ ವೋಲ್ವೇಜ್ ಸಮಸ್ಯೆ ನಿವಾರಣೆ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಉಪ ವಿಭಾಗಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮ ವಹಿಸಲಾಗಿದೆ.ಐದಾರು ವರ್ಷಗಳಿಂದ ರೈತರು,ಕಾಫಿ ಬೆಳಗಾರರು ಸೇರಿದಂತೆ ಸಾರ್ವಜನಿಕರು ಸಮರ್ಪಕ ಗುಣಮಟ್ಟದ ವಿದ್ಯುತ್ ಇಲ್ಲದೆ ಪರಿ ತಪ್ಪಿಸುತ್ತಿದ್ದರುಆದ್ದರಿಂದ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಹಾರ್ಲೆಕೂಡಿಗೆ,ಯಸಳೂರು ಹೋಬಳಿಯ ಗಂಗಾಧರ ಬಡಾವಣೆ ಹಾಗೂ ಪೇಟೆ ಕಾಲೋನಿ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವುದ್ದರಿಂದ ಗುಣಮಟ್ಟದ ವಿದ್ಯುತ್ ಸಮಸ್ಯೆಗೆ ಮುಕ್ತಿ ಕಾಣಲಿದೆ ಎಂದರು.
ಸೆಸ್ ಅಧಿಕಾರಿಗಳು ಗ್ರಾಮ ಹಾಗೂ ಕೃಷಿ ಪ್ರದೇಶಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದರು.ತಾಲೂಕಿಗೆ ವಿದ್ಯುತ್ ಉಪಸ್ಥಾವರ ಸೇರಿದಂತೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಉಂಟಾಗಿರುವ ನಾನಾ ಸಮಸ್ಯೆಗಳ ನಿವಾರಣೆಗೆ ಈಗಾಗಲೇ ಇಂಧನ ಸಚಿವರಾದ ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮನವಿ ಸಲ್ಲಿಸಲಾಗಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ವಿದ್ಯುತ್ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸೆಸ್ ಸಹಾಯಕ ಕಿರಿಯ ಇಂಜಿನಿಯರ್ ಹರೀಶ್ ಹೆಬ್ಬಸಾಲೆ ಗ್ರಾ ಪಂ ಅಧ್ಯಕ್ಷೆ ನೇತ್ರಾವತಿ ಮೇಘರಾಜ್,ಗ್ರಾಪಂ ಸದ್ಯಸ್ಯೆ ಜ್ಯೋತಿ ಮುಖಂಡರಾದ ಗುಡ್ಡಪ್ಪ ಶೆಟ್ಟಿ,ರವಿ ಮೇಘರಾಜ್,ರಾಜ್ ಕುಮಾರ್,ಪವಿತ್ರ,ದಿಲೀಪ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು




