ಆಲೂರು: ತಾಲ್ಲೂಕಿನ ಕೆ .ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲೂರು, ಕಾಡ್ಲುರು ಕೊಪ್ಪಲು, ಗಳಲ್ಲಿ ಓವರ್ ಲೋಡ್, ಪವರ್ ಕಟ್, ಜಂಪರ್ ಕಟ್ ಹೀಗೆ ವಿದ್ಯುತ್‌ಗೆ ಸಂಬಂಧಿಸಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನೂತನ ಟ್ರಾನ್ಸ್ಫಾರ್ಮರ್ ಗೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು.

ನಂತರ ಮಾತನಾಡಿದವರು ಲೋ ವೋಲ್ವೇಜ್ ಸಮಸ್ಯೆ ನಿವಾರಣೆ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಉಪ ವಿಭಾಗಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮ ವಹಿಸಲಾಗಿದೆ.ಐದಾರು ವರ್ಷಗಳಿಂದ ರೈತರು,ಕಾಫಿ ಬೆಳಗಾರರು ಸೇರಿದಂತೆ ಸಾರ್ವಜನಿಕರು ಸಮರ್ಪಕ ಗುಣಮಟ್ಟದ ವಿದ್ಯುತ್ ಇಲ್ಲದೆ ಪರಿ ತಪ್ಪಿಸುತ್ತಿದ್ದರುಆದ್ದರಿಂದ ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡ್ಲೂರು ನ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವುದ್ದರಿಂದ ಗುಣಮಟ್ಟದ ವಿದ್ಯುತ್ ಸಮಸ್ಯೆಗೆ ಮುಕ್ತಿ ಕಾಣಲಿದೆ ಎಂದರು.

ಸೆಸ್ಕ್ ಅಧಿಕಾರಿಗಳು ಗ್ರಾಮ ಹಾಗೂ ಕೃಷಿ ಪ್ರದೇಶಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದರು.ತಾಲೂಕಿಗೆ ವಿದ್ಯುತ್ ಉಪಸ್ಥಾವರ ಸೇರಿದಂತೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಉಂಟಾಗಿರುವ ನಾನಾ ಸಮಸ್ಯೆಗಳ ನಿವಾರಣೆಯಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಸೆಸ್ಕ್ ಸಹಾಯಕ ಕಿರಿಯ ಇಂಜಿನಿಯರ್ , ಮಲ್ಲಾಪುರ ಗ್ರಾಮ ಪಂಚಾಯತಿ ಪಿಡಿಒ ಪರಮೇಶ್ , ಗ್ರಾಂ ಪಂ ಸದಸ್ಯ ಚಂದನ್ ಹೈದುರು, ಬಿಜೆಪಿ ಹಿರಿಯ ಮುಖಂಡ, ರಾಜಕುಮಾರ್, ಬಾಸ್ಮನಹಳ್ಳಿ ರಾಮಯ್ಯ, ಹರ್ಷವರ್ಧನ ಕೊಪ್ಪಲ್, ಅಶೋಕ್ ,ಲೈನ್ ಮ್ಯಾನ್ ರಮೇಶ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *