
ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನಾ ಕೇಂದ್ರ ಅಡಗೂರು, ಹಾಗೂ ಶ್ರೀ ವರಸಿದ್ಧಿ ವಿನಾಯಕ ಯೋಗ ಸಭಾ ವತಿಯಿಂದ ಇಂದು ಹಾಸನ ನಗರದ ಎಸ್.ಬಿ.ಎಂ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ “ವಿಶ್ವ ಯೋಗ ದಿನಾಚರಣೆ”ಯ ಅಂಗವಾಗಿ ಯೋಗಾಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಯೋಗಾಸನದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಗ ಗುರು “ಚೇತನ್ ಗುರೂಜಿ*” *ರವರು, ಶ್ರೀ ವರಸಿದ್ದಿ ವಿನಾಯಕ ಯೋಗ ಸಭಾದ ಮುಖ್ಯಸ್ಥರಾದ ಶ್ರೀ “ಮಧುಶರ್ಮಾ” ರವರು,* *ರೋ!! ವಜ್ರಕುಮಾರ್,* *ರೋ!! ಎಂ.ಬಿ.ವಿಶ್ವನಾಥ್,* *ರೋ !! ಕೆ.ಎಸ್.ಯೋಗೇಶ್ , ರೋ !! ಮಧು ರವರು ಹಾಗೂ ಇನ್ನಿತರೆ ಶಿಬಿರಾರ್ಥಿಗಳು ಹಾಜರಿದ್ದರು.



