ಆಲೂರು : ಪಟ್ಟಣದಲ್ಲಿರುವ ಆಲೂರು ಪೊಲೀಸ್ ಠಾಣೆಗೆ ತಾಲೂಕಿನ ಕಸಬಾ, ಪಾಳ್ಯ, ಕೆಂಚಮ್ಮ ಹೊಸಕೋಟೆ ಹಾಗು ಕುಂದೂರು ಹೋಬಳಿ ವ್ಯಾಪ್ತಿಯಲ್ಲಿರುವ ರೌಡಿ-ಶೀಟರ್‌ಗಳನ್ನು ಭಾನುವಾರ ಠಾಣೆಗೆ ಕರೆಸಿ ಪರೇಡ್ ನಡೆಸಿದ ಮಾತನಾಡಿದರು.

ರೌಡಿಶೀಟರ್‌ಗಳು ಸಮಾಜ ವಿರೋಧಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮತ್ತು ಅಗತ್ಯವಿದ್ದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಪೊಲೀಸರು ರೌಡಿಶೀಟ‌ರ್ ಪಟ್ಟಿಗೆ ಸೇರಿಸಿರುತ್ತಾರೆ. ಅದಾದ ಬಳಿಕವೂ ಯಾವುದಾದ್ರೂ ಪ್ರಕರಣಗಳಲ್ಲಿ ಅವರ ಪಾತ್ರ ಕಂಡು ಬಂದರೆ ರೌಡಿಶೀಟ‌ರ್ ಹಣೆ ಪಟ್ಟಿಯಲ್ಲೇ ಮುಂದುವರಿಯುತ್ತಾರೆ. ಇನ್ನು 10 ವರ್ಷಗಳಲ್ಲಿ ಯಾವುದೇ ಕೃತ್ಯದಲ್ಲಿ ಭಾಗಿಯಾಗದಿದ್ದರೆ ಅಂತಹವರನ್ನು ಆ ಪಟ್ಟಿಯಿಂದ ತೆಗೆಯಲಾಗುತ್ತದೆ.

ಹಾಗಾಗಿ ರೌಡಿಶೀಟರ್‌ಗಳು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ನೆಮ್ಮದಿ ಜೀವನ ನಡೆಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಆಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಳಾದ ನಾಗೇಶ್, ಜನಬಾಯ್ ಕಡಪಟ್ಟಿ, ಎ.ಎಸ್.ಐ ಅನಂತ್, ಸಿಬ್ಬಂದಿಗಳಾದ ಹರೀಶ್, ಸಂಗಮ್, ಪೂರ್ಣಚಂದ್ರ, ಪುನೀತ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *