ಸಕಲೇಶಪುರ :- ರಾಷ್ಟ್ರೀಯ ಹೆದ್ದಾರಿ 75 ರಸ್ತೆಯಿಂದ ಆನೆಮಾಲ್,ಜನಕೆರೆ,ಅರೆಕೆರೆ, ಬ್ಯಾಕರವಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಆನೆಮಾಲ್ ಬಳಿ ರಸ್ತೆಗೆ ಗುಂಡಿ ಬಿದ್ದು ಸುಮಾರು ಐದು ತಿಂಗಳಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ಪ್ರಯಾಣಿಕರು, ವಾಹನ ಚಾಲಕರು ಪರದಾಡುವಂತಹ ಪರಿಸ್ಥಿತಿ ಇದೆ. ಎಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರು.

ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75 ರಿಂದ್ ಅರೆಕೆರೆ,ಜನಕೆರೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇವಲ 10 ಅಡಿಯಲ್ಲಿ ರಸ್ತೆಗೆ ನಿರ್ಮಿಸಿರುವ ಉಬ್ಬುಗಳ ಅಕ್ಕಪಕ್ಕ ಅಳವದ ಗುಂಡಿಗಳು ಬಿದ್ದಿರುವುದರಿಂದ ಅಪಘಾತವಾಗುವ ಸಂಭವ ಹೆಚ್ಚಿದೆ. ಈಗಾಗಲೆ ಈ ರಸ್ತೆಯಲ್ಲಿ ಸಂಚಾರಿಸುವ ವಾಹನಗಳಿಗೆ ಈ ಗುಂಡಿಗಳಿಂದ ಹನಿಯಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಹೆಚ್ಚು ಪ್ರವಾಸಿಗರು ಸಂಚಾರಿಸುವುದರಿಂದ ಅಪಘಾತವಾಗುವ ಸಂಭವ ಹೆಚ್ಚಿದೆ.ಎಂದು .ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ನಗರ ಘಟಕದ ಅಧ್ಯಕ್ಷರಾದ ಹೇಮಂತ್,ಹಾಗೂ ಕಸಬಾ ತಾಲೂಕು ಅಧ್ಯಕ್ಷರಾದ ಸಿದ್ದಂತ್ ಹೇಳಿದರು.

ಇಂತಹ ಗಂಭೀರವಾದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗುಂಡಿಗಳನ್ನು ಮುಚ್ಚಿ ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು.ಇಲ್ಲವಾದರೆ ಸಮಸ್ಯೆಗಳದಲ್ಲಿ ಅಧಿಕಾರಿಗಳೆ ತೆಲೆದಂಡ ತರಬೇಕಾಗುತ್ತದೆ.ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ ಹಾಗೂ ಕರಡಿಗಾಲ ಹರೀಶ್ ಹಾಗೂ ಚಿದಾನಂದ್ ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *