
ಆಲೂರು : ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಿ ಪದವಿಪೂರ್ವ ಕಾಲೇಜು ಆಲೂರು ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ಆಲೂರು ಪೊಲೀಸ್ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು..ಕಾರ್ಯಕ್ರಮದಲ್ಲಿ ಆಲೂರು ವೃತ್ತ ನಿರೀಕ್ಷಕ ಮೋಹನ ರೆಡ್ಡಿ ತಾಲ್ಲೂಕು ಅರೋಗ್ಯಧಿಕಾರಿ ಡಾ, ನಿಸಾರ್ ಪಾತಿಮಾ ಆಲೂರು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ್ ಪೊಲೀಸ್ ಸಿಬ್ಬಂದಿಗಳಾದ ಹರೀಶ್ ಉಮರ್ ಪಾರುಕ್ ಹಾಗೂ ವಿದ್ಯಾರ್ಥಿಗಳಿದ್ದರು.



