ಆಲೂರು : – ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮ ಪಂಚಾಯಿತಿಗೆ ಸೇರಿದ ಬಡಗಿ ಕೊಪ್ಪಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಮಂಗಳವಾರ ರಾತ್ರಿ ಪ್ರಶಾಂತ್ ಬಿನ್ ಲೇಟ್ ಅರಳಪ್ಪ ಎಂಬುವರಿಗೆ ಸೇರಿದ ಮಂಗಳೂರಿನ ಹಂಚಿನ ಮನೆಯೊಂದು ಗಾಳಿ ಮಳೆಗೆ ಗೋಡೆ ಶಿಥಿಲಗೊಂಡು ಮುರಿದು ಬಿದ್ದು ಮನೆಯಲ್ಲಿದ್ದ ದಿನಸಿ ಪೀಠೋಪಕರಣಗಳು ಬಟ್ಟೆಗಳು ಮಳೆಗೆ ಆಹುತಿಆಗಿದ್ದು . ಅದೃಷ್ಟವಶಾತ್ ಯಾವುದೇ ಪ್ರಾಣಪಯವಾಗಿಲ್ಲ.

ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಿದ್ದು ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಪಾಯವಾಗಿಲ್ಲ ವಿಷಯ ತಿಳಿದ ಮಗ್ಗೆ ಗ್ರಾಮ ಪಂಚಾಯಿತಿಯ ಪಿಡಿಒ ಪರಮೇಶ್ ಹಾಗೂ ಗ್ರಾಮ ಲೆಕ್ಕಿಗ ಮಂಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ಹಾನಿಗೆ ಒಳಗಾದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸಮಾಧಾನ ಪಡಿಸಿದ್ದಾರೆ.

ಮತ್ತೊಂದೆಡೆ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯ ಗೋಡೆ ಪಕ್ಕದಲ್ಲಿಯೇ ನಿಲ್ಲಿಸಿದ್ದ ಟ್ಯಾಕ್ಟರ್ ಮೇಲೆ ಮನೆ ಗೋಡೆ ಕುಸಿದು ಬಿದ್ದು ಟ್ಯಾಕ್ಟರ್ ಸಂಪೂರ್ಣ ಜಖಂ ಗೊಂಡಿದೆ. ಈ ಘಟನೆಯು ತಾಲೂಕಿನ ಕಸಬಾ ಹೋಬಳಿ ಮರಸು ಕೊಪ್ಪಲು ಗ್ರಾಮದಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *