
.ಬೇಲೂರು : ಪೊಲೀಸ್ ಇಲಾಖೆ ,ತಾಲೂಕು ಆಡಳಿತ ಹಾಗು ಶಿಕ್ಷಣಾ ಇಲಾಖೆ ವತಿಯಿಂದ ಮಾದಕ ವಸ್ತು ವಿರೋಧಿ ದಿನಾಚರಣೆ ಆಚರಿಸಲಾಯಿತು.
ಪಟ್ಟಣದ ಚನ್ನಕೇಶವ ದೇವಸ್ಥಾನ ಮುಂಭಾಗದಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ಜಾಥ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿಪಿಐ ಎಸ್ ಜಿ ಪಾಟೀಲ್,ಜೂನಿಯರ್ ಕಾಲೇಜ್ ಪ್ರಾಂಶುಪಾಲ ಲಕ್ಷ್ಮೀ ಸತ್ಯನಾರಾಯಣ್. ಬೇಲೂರು ಪಬ್ಲಿಕ್ ಸ್ಕೂಲ್,ಸರ್ವೋದಯ,ಯುನೈಟೆಡ್, ದಿವ್ಯಶಾಲೆ,ಮೌಂಟ್ ಕಾರ್ಮೆಲ್,ರೋಟರಿ,ವಿದ್ಯವಿಕಾಸ ಶಾಲೆ ಸೇರಿದಂತೆ ಇತರ ಶಾಲೆಗಳ ಪ್ರಾಂಶುಪಾಲರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.
