
*ಆಲೂರು: ಅದ್ದೂರಿಯಾಗಿ ಜರುಗಿದ ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ನೂತನ ಅಧ್ಯಕ್ಷರಾಗಿ ಅಣ್ಣೇಗೌಡ ಹಾಡ್ಯ ಕಾರ್ಯದರ್ಶಿಯಾಗಿ ಸಂತೋಷ್ ಕಿತ್ತಗೆರೆ, ಖಜಂಚಿಯಾಗಿ ರಮೇಶ್ ಕುರೆಗಲ್ ಆಯ್ಕೆಯಾದರು.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಲಯನ್ಸ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಲಯನ್ ಸಂಜಿತ್ ಶೆಟ್ಟಿ ಪಿ ಎಂ ಜೆ ಎಫ್ ಪೂರ್ವ ರಾಜ್ಯಪಾಲರು ಉದ್ಘಾಟಿಸಿ ಮಾತನಾಡಿ ಲಯನ್ಸ್ ಸೇವಾ ಸಂಸ್ಥೆ ಕಳೆದ 108 ವರ್ಷಗಳಲ್ಲಿ 220 ದೇಶಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಸದಸ್ಯರುಗಳನ್ನು ಒಳಗೊಂಡಿರುವ ಏಕೈಕ ಅಂತರರಾಷ್ಟ್ರೀಯ ಸಂಸ್ಥೆ ಎಂದರೆ ಅದು ಲಯನ್ಸ್ ಸೇವಾ ಸಂಸ್ಥೆ ಎಂದು ಹೆಮ್ಮೆ ಪಡುತ್ತೇನೆ. ಹಾಗಾಗಿ ಲಯನ್ಸ್ ಸೇವಾ ಸಂಸ್ಥೆ ಎಲ್ಲಿರುವ ನಾವೆಲ್ಲರೂ ಈ ಸಂಸ್ಥೆಗೆ ಹೆಚ್ಚಿನ ಸೇವೆಗಳನ್ನು ನೀಡುವ ಮುಖಾಂತರ ಜಾತಿ ಮತ ಮೀರಿ ನಾವೆಲ್ಲರೂ ಒಂದೇ ಎಂದು ಸೇವೆ ಮಾಡುವುದು ನಮ್ಮ ಉದ್ದೇಶ. ಲಯನ್ಸ್ ಸೇವಾ ಸಂಸ್ಥೆ ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ಸಮಾಜಸೇವಕ ಗೀತಾ ಕಾಫಿ ಟ್ರೇಡಿಂಗ್ ಮಾಲೀಕರು ಎಚ್ ಎಸ್ ಧರ್ಮರಾಜ್ ಮಾತನಾಡಿ ದೇಶದ ಭದ್ರತೆ, ನಾಡಿನ ಭದ್ರತೆಯನ್ನು, ಗಮನದಲ್ಲಿ ಇಟ್ಟುಕೊಂಡು ಸಮಾಜದ ಆರೋಗ್ಯವನ್ನು ಕಾಪಾಡುವ ಒಂದು ಸಂಸ್ಥೆ ಎಂದರೆ ಅದು ಲಯನ್ಸ್ ಸೇವಾ ಸಂಸ್ಥೆ. ಲಯನ್ಸ್ ಸೇವಾ ಸಂಸ್ಥೆಯ ಸೇವೆಗಳು ದೇಶಕ್ಕೆ ಮಾತ್ರವಲ್ಲದೆ ವಿದೇಶಗಳಲ್ಲೂ ಸಹ ಸೇವಾ ಪ್ರಸಿದ್ಧಿ ಪಡೆಡಿವೆ. ಸಂಸ್ಥೆಯ ಇಂತಹ ಸೇವೆಗಳನ್ನ ಅರಿತುಕೊಂಡು ಇಂದು ಪದಗ್ರಹಣ ಮಾಡುತ್ತಿರುವ ಸದಸ್ಯರುಗಳು ಮುಂದಿನ ದಿನಗಳಲ್ಲಿ ಉನ್ನತ ಮಠದ ಸೇವೆಗಳನ್ನು ಮಾಡಿ ನಿಮ್ಮ ಸೇವೆಗಳಿಗೆ ನಾನು ಸದಾ ಸಹಕರಿಸುತ್ತೇನೆ ಎಂದರು.
ಲಯನ್ಸ್ ಸೇವಾ ಸಂಸ್ಥೆಯ ವಲಯ ಅಧ್ಯಕ್ಷ ರಘು ಪಾಳ್ಯ ಮಾತನಾಡಿ ಕೆಂಚಮ್ಮನ ಹೊಸಕೋಟೆ ಲಯನ್ಸ್ ಸೇವಾ ಸಂಸ್ಥೆ ಕಳೆದ ಆರು ವರ್ಷಗಳಿಂದಲೂ ವಿಶಿಷ್ಟ ಸೇವೆಗಳನ್ನು ಮಾಡುತ್ತಾ ಬಂದಿದ್ದು ಸದಸ್ಯರಗಳನ್ನು ಸಹ ಹೆಚ್ಚು ಹೊಂದುತ್ತಾ ಬಂದಿದೆ ಈಗಾಗಲೇ ಸ್ವಂತ ಕಟ್ಟಡ ಕಟ್ಟುವ ಹಂತಕ್ಕೆ ಬಂದಿರುವ ನಿಮ್ಮ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ, ಸಂಸ್ಥೆಯ ಜೊತೆಗೆ ಎಲ್ಲಾ ಪ್ರಾಂತೀಯ ಸಂಸ್ಥೆಗಳು ಬೆಂಬಲವಾಗಿ ಕೈಜೋಡಿಸುತ್ತೇವೆ ಎಂದರು.
ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ ಎನ್ ಕುಮಾರ್ ಮಾತನಾಡಿ ಲಯನ್ಸ್ ಸೇವಾ ಸಂಸ್ಥೆ ಪ್ರತಿ ತಿಂಗಳು ಒಂದೊಂದು ಸೇವಾ ಕಾರ್ಯಗಳನ್ನು ಮಾಡುವುದರ ಜೊತೆಗೆ ರಕ್ತದಾನ ಶಿಬಿರ, ಯೋಗ ಶಿಬಿರ, ಗಿಡಗಳ ವಿತರಣೆ, ಸ್ವಚ್ಛತಾ ಕಾರ್ಯಕ್ರಮ, ಬಡವರಿಗೆ ಆಹಾರ ಕಿಟ್ ವಿತರಣೆ, ಬಡವರ ಮತ್ತು ಸಮಾಜಮುಖಿ ಕಾರ್ಯ ಕ್ರಮಗಳಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ ಅದೇ ರೀತಿ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಶಾಲೆಗಳಿಗೆ ಕಂಪ್ಯೂಟರ್ ಸಹ ವಿತರಣೆ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನೂ ಹೆಚ್ಚು ಹೆಚ್ಚಿನ ಸೇವೆಗಳನ್ನು ಮಾಡುತ್ತದೆ ಎಂದರು.
ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಲೋಹಿತ್ ಎಸ್ ಕೆ ಎನ್ ಆರ್ ಎಚ್ ಎಸ್ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾಜ ಸೇವೆ ಮತ್ತು ಕೃಷಿಯಲ್ಲಿ ಚಟುವಟಿಕೆಯಲ್ಲಿ ಸಾಧನೆ ಮಾಡುತ್ತಿರುವ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷರು ಕಿಶೋರ್, ಲಯನ್ಸ್ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂತ್ಯ ಅಧ್ಯಕ್ಷ ರಾಭಿ ಸೋಮಯ್ಯ, ಸುಧಾಕರ್, ಮಾಜಿ ಅಧ್ಯಕ್ಷರುಗಳಾದ ಹರೀಶ್, ಸಂತೋಷ್ ಕೊಟ್ಟೂರಪ್ಪ, ನಿಕಟಪೂರ್ವ ಕಾರ್ಯದರ್ಶಿ ದಿನೇಶ್, ಖಜಾಂಚಿ ಕುಮಾರ್ ಬೆಂಬಳೂರು, ಆರ್ ಎಲ್ ವೆಂಕಟೇಶ್ ಮೋಹನ್ ಕಾಡ್ಲೂರು, ಕುಮಾರ್ ಕೆ ಬಿ, ಜಗದೀಶ್, ದಿಲೀಪ್, ದರ್ಶನ್, ದುಶಾಂತ್, ಯೋಗೇಶ್ ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.
