
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಬಾಚಿಹಳ್ಳಿ. ವಳಲಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸುರಕ್ಷತೆ ಹಾಗೂ ರಾತ್ರಿ ಕಾಲದ ಸುಗಮ ಸಂಚಾರಕ್ಕೆ ಅಳವಡಿಸಲಾಗಿರುವ ಐ-ಮಾಸ್ಕ್ ದೀಪ ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ.
ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಸ್ಥಳೀಯ ಜನತೆ ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ.ಮಹಿಳೆಯರು, ವಿದ್ಯಾರ್ಥಿನಿಯರು , ಹಿರಿಯರು ಮತ್ತು ಮಕ್ಕಳು ರಾತ್ರಿ ವೇಳೆ ಸಂಚರಿುವುದು ಕಷ್ಟಕರವಾಗಿದೆ. ಸುತ್ತಮುತ್ತ ಹತ್ತಾರು ಗ್ರಾಮಗಳ ಪ್ರಯಾಣಿಕರಿಗೆ ರಾತ್ರಿ ಸಮಯದಲ್ಲಿ ಈ ವೃತ್ತದಲ್ಲಿ ಬೆಳಕು ಇಲ್ಲದಂತಾಗಿದೆ.
ಈ ಕುರಿತು ಹಲವು ಭಾರಿ ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ದೀಪ ದುರಸ್ತಿ ಕಾರ್ಯ ನಡೆಯಲ್ಲಿಲ್ಲ ಎಂದುಸರ ಗ್ರಾಮ ಪಂಚಾಯಿತಿ ಇಲಾಖೆಯ ಮೇಲೆ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ.ಆದ್ದರಿಂದ, ಸಾರ್ವಜನಿಕ ಹಿತದ ದೃಷ್ಟಿಯಿಂದ ತಕ್ಷಣ ಸಂಬಂಧಪಟ್ಟ ಟೆಕ್ನಿಕಲ್ ಸಿಬ್ಬಂದಿಯನ್ನು ಕಳುಹಿಸಿ ಐ-ಮಾಸ್ಕ್ ದೀಪದ ದುರಸ್ತಿ ಮತ್ತು ಮರುಸ್ಥಾಪನೆ ಕಾರ್ಯವನ್ನು ಕೈಗೊಳ್ಳಬೇಕು ಎಂಬುದಾಗಿ ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಗಗನ್ ಹಾಡ್ಲಹಳ್ಳಿ ಒತ್ತಾಯಿಸಿದ್ದಾರೆ.
