ಅರಸೀಕೆರೆ : ಲಿಂಗಾಯಿತ ಸಂಸ್ಥಾಪಕ ಶ್ರೀ ಬಸವಣ್ಣನವರನ್ನು ಈಗಾಗಲೇ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಬಸವ ತತ್ವ ಬೆಳೆಸಲು ಇತ್ತೀಚೆಗೆ ಧಾರವಾಡದಲ್ಲಿ ನಡೆದ 280 ಕ್ಕೂ ಹೆಚ್ಚು ಮಠಾಧೀಶರ ಸಮಾವೇಶದಲ್ಲಿ ನಿರ್ಣಯಿಸಿದ್ದು ಸೆಪ್ಟೆಂಬರ್ 21ರಂದು ಹಾಸನ ಜಿಲ್ಲೆಯಲ್ಲಿ ಬಸವ ತತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ ಬಸವ ತತ್ವ ಬೆಳೆಸುವ ಅಭಿಯಾನಕ್ಕೆ ಲಿಂಗಾಯಿತ ಮಠಾಧೀಶರೆಲ್ಲ ಒಟ್ಟಾಗಿ ಒಗ್ಗೂಡಿ ಪಣತೊಡಬೇಕಿದೆ ಸ್ವಾಮಿಗಳಿಗೆ ಯಾವತ್ತಿದ್ದರೂ ಸಮಾಜವೇ ಮುಖ್ಯ ನಾವುಗಳೆಲ್ಲ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಆಲೋಚನೆಗಳನ್ನು ಸ್ವಾಗತಿಸುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು ನಮ್ಮ ಬಸವ ಧರ್ಮದ ಬೆಳಕನ್ನು ಎಲ್ಲಡೆ ಸೂಸಲು ಇದೊಂದು ಒಳ್ಳೆಯ ಅವಕಾಶವಿದ್ದು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು

ಬಸವ ಧರ್ಮದ ಅಸ್ಮಿತೆಯನ್ನು ಕಾಪಾಡುವ ಹೊಣೆಗಾರಿಕೆ ಮಠಾಧೀಶರ ಮೇಲಿದ್ದು ಬೇರೆ ಧರ್ಮದಿಂದ ಹಾಗೂ ಅನ್ಯಾಯಗಳ ವಿರುದ್ಧ ತಕ್ಕ ಉತ್ತರ ನೀಡಲೇಬೇಕಿದೆ ಆದ್ದರಿಂದ ರಾಜ್ಯದಲ್ಲಿ ಸೆಪ್ಟೆಂಬರ್ 1ರಿಂದ30ರವರೆಗೆಎಲ್ಲಾ ಜಿಲ್ಲೆಗಳನ್ನು ಸಮಾವೇಶ ನಡೆಯಲಿದ್ದು ಎಲ್ಲಾ ಮಠಾಧೀಶರು ಒಟ್ಟಾಗಿ ಭಾಗವಹಿಸಿ ಬಸವತತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.ಮಾಡಾಳು ಶಿವಲಿಂಗಪ್ಪ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *