ಅರಕಲಗೂಡು : ವಿಧಾನಸಭಾ ಕ್ಷೇತ್ರದ ಉಪ್ಪಾರ ಸಮಾಜದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅರಕಲಗೂಡು ತಾಲೂಕು ಉಪ್ಪಾರ ಸಮಾಜದ ಯುವ ಮುಖಂಡ ಸೂರ್ಯ ರವರು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ಮತ್ತು ಭಗೀರಥ ಮಹರ್ಷಿಯ ಭಾವಚಿತ್ರವನ್ನು ಪ್ರಶಸ್ತಿಯನ್ನಾಗಿ ನೀಡಿ ಪ್ರತಿಭಾ ಪುರಸ್ಕಾರ ಮಾಡಿದರು.

ನಂತರ ಮಾತನಾಡಿದ ಅವರು ರಾಜ್ಯ ಉಪಾರ ನಿಗಮದ ಮಾಜಿ ಅಧ್ಯಕ್ಷರಾದ ಗಿರೀಶ್ ಅವರ ಸೂಚನೆಯಂತೆ ನಮ್ಮ ಅರಕಲಗೂಡು ತಾಲೂಕಿನಲ್ಲಿ ನಮ್ಮ ಸಮಾಜದ ಏಳಿಗೆಗಾಗಿ ಉತ್ತಮವಾಗಿ ಎಸೆಸೆಲ್ಸಿ ಪರೀಕ್ಷೆ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಇಂದು ನಾನು ನಮ್ಮ ತಂಡ ತಾಲೂಕಿನಾದ್ಯಂತ ಇರುವ ಉಪ್ಪಾರ ಸಮಾಜದ ಊರುಗಳಿಗೆ ಭೇಟಿ ನೀಡಿ ಅಲ್ಲಿಯ ಮಕ್ಕಳನ್ನು ಗುರುತಿಸಿ ಅವರಿಗೆ ಇಂದು ನಾವು ಗೌರವಿಸಿದ್ದೇವೆ ಅವರುಗಳು ಮುಂದಿನ ದಿನಗಳಲ್ಲಿ ಉನ್ನತವಾದ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಒಳ್ಳೆಯ ಪ್ರಜೆ ಆಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸವನ್ನು ಮಾಡಿದ್ದೇವೆ ಎಂದರು.

ನಾವುಗಳೆಲ್ಲರೂ ಪರಮಪೂಜ್ಯ ಶ್ರೀ ಭಾರ್ಗವ ನಂದಗಿರಿ ಸ್ವಾಮೀಜಿಗಳ ಆಶೀರ್ವಾದವನ್ನು ಬೇಡುತ್ತಾ ನಮ್ಮ ಸಮಾಜದ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಬೇಕು ಎಂದರು ಎಲ್ಲ ಊರುಗಳಿಗೂ ತೆರಳಿ ಯಾವುದೇ ವೇದಿಕೆ ಕಾರ್ಯಕ್ರಮವನ್ನು ನಡೆಸದೆ ವಿನೂತನವಾಗಿ ಮಕ್ಕಳನ್ನು ಗೌರವಿಸಿದರು

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಪ್ಪಾರ ಯುವ ಅಧ್ಯಕ್ಷರು ಮೋಹನ್, ಲಕ್ಷ್ಮೀಶ ಮಂಜು ಸುನಿಲ್ ಮುಂತಾದವರು ಗ್ರಾಮದ ಮುಖಂಡರುಗಳು ಜೊತೆಯಲ್ಲಿ ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *