
ಅರಸೀಕೆರೆ : ಗುರು ಪರಂಪರೆಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಸುಕ್ಷೇತ್ರ ಹಾರನಹಳ್ಳಿಕೋಡಿಮಠದ ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ನಮ್ಮೆಲ್ಲರಿಗೂ ಮಹಾ ಗುರುಗಳಿದ್ದಂತೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜ ಯೋಗಿ Oದ್ರ ಸ್ವಾಮೀಜಿ ಭಾನುವಾರ ಬಣ್ಣಿಸಿದರು
ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದಲ್ಲಿ ಆಯೋಜಿಸಿದ್ದ ಕಡೂರ್ ತಾಲೂಕ್ ಕೆಬಿದರೆ ದೊಡ್ಡ ಮಠದ ಲಿಂಗೈಕ್ಯ ಗುರು ಯೋಗಿರಾಜ ಪ್ರಭು ಕುಮ ರ ಪಟ್ಟಾಧ್ಯಕ್ಷರ 94ನೇ ವರ್ಷದ ಪುಣ್ಯ ಸ೦ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು
ಕೋಡಿಮಠವು ರಾಜ್ಯವು ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದುಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಿ ವಿ ನರಸಿಂಹರಾವ್ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್ ರವರು ಸೇರಿದಂತೆ ರಾಜ್ಯ ಹಾಗೂ ದೇಶದ ಪ್ರಮುಖ ರಾಜಕಾರಣಿಗಳಿಗೆ ಮಾತ್ರವಲ್ಲದೆ ಮಠ ಮಂದಿರವನ್ನು ಮುನ್ನಡೆಸುವ ನಮ್ಮಂತಹ ಅನೇಕ ಮಠಾಧೀಶರುಗಳಿಗೆ ನಿಖರ ಭವಿಷ್ಯವಾಣಿಯ ಮೂಲಕ ಮಾರ್ಗದರ್ಶನ ನೀಡಿರುವ ಮತ್ತು ನೀಡುತ್ತಿರುವಕೋಡಿಮಠದ ಶ್ರೀಗಳನ್ನು ಮಹಾ ಗುರುಗಳೆಂದುಕರೆಯುವುದರಿಂದ ಎಂದು ನಮ್ಮೆಲ್ಲರ ಗೌರವ ಹೆಚ್ಚಾಗಲಿದೆ ಎಂದು ಸ್ವಾಮೀಜಿ ತಿಳಿಸಿದರು
ಮಾಜಿ ಶಾಸಕ ಕೆ ಪಿ ಪ್ರಭುಕುಮಾರ್ಮಾತನಾಡಿ ಪ್ರಸ್ತುತ ವೀರಶೈವ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದ್ದು ಇಂತಹ ಸಂದೀಪ್ ದ ಪರಿಸ್ಥಿತಿಯಲ್ಲಿ ಕೋಡಿ ಮಠದ ಶ್ರೀಗಳು ಹಾಗೂ ಮಠಾಧೀಶರು ಸಮಾಜವನ್ನು ಒಗ್ಗೂಡಿಸಿ ಸಂಘಟಿಸುವ ಕೆಲಸವನ್ನು ಮಾಡಬೇಕೆಂದು ಅವರು ಮನವಿ ಮಾಡಿದರು
ಮಾಜಿ ಶಾಸಕ ಜಿಎಸ್ ಪರಮೇಶ್ವರಪ್ಪ ಮಾತನಾಡಿ ಕೋಡಿಮಠವುಹಲವು ದಶಕಗಳ ಹಿಂದೆ ನಾಡಿನ ಉದ್ದಗಲಕ್ಕೂ ಭಕ್ತರಿದ್ದರು ಆರ್ಥಿಕ ಪರಿಸ್ಥಿತಿಯಲ್ಲಿ ಬಾರಿ ನಡೆಯಲಿತ್ತು ಆದರೆ ಈ ಮಠಕ್ಕೆ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಪಟ್ಟಾಧ್ಯಕ್ಷರಾದ ಮೇಲೆ ದಿನದಿಂದ ದಿನಕ್ಕೆಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತ ಈಗ ಸದೃಢವಾಗಿ ಬೆಳೆದಿರುವುದನ್ನು ಕಾಣಬಹುದು ಎಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಜೆಡಿಎಸ್ ಸಂಸ್ಥಾನ ಮಠದ ಮಹಾಂತ ಶಿವಯೋಗಿಗಳು ಯೋಗ ಪ್ರದರ್ಶಿಸಿದ್ದು ನೆರೆದಿದ್ದ ಮಠಾಧೀಶರು ಹಾಗೂ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆದು ಮೆಚ್ಚುಗೆಗಳಿಸಿತು
ಸರ್ಕಾರದ ದಿನ ಕಾರ್ಯದರ್ಶಿ ನರಸಿಂಹಮೂರ್ತಿಅವರ ಪತ್ನಿ ಶಶಿಕಲಾ ದಂಪತಿಗಳನ್ನು ಮಠದವತಿಯಿಂದ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು ಕಾರ್ಯಕ್ರಮಕ್ಕೆ ಮುನ್ನ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
