ಸಕಲೇಶಪುರ : ಸಕಲೇಶಪುರ ಮೂಡಿಗೆರೆಗೆ ತೆರಳುವ KA-18F-0548 ನಂಬರಿನ ಕೆ ಎಸ್ ಆರ್ ಟಿ ಸಿ ಬಸ್ ಇಂದು ಬೆಳ್ಳಂಬೆಳಗ್ಗೆ ಕೆಟ್ಟು ನಿಂತಿದ್ದು ಶಾಲೆ ಕಾಲೇಜ್ ಮಕ್ಕಳು ಸಮಯಕ್ಕೇ ಸರಿಯಾಗಿ ಬಸ್ಸು ಸಿಗದೇ ಪರದಾಡಿದ ಸಂಗಾತಿ ವೆಂಕಟಹಳ್ಳಿ ಬಸ್ ನಿಲ್ದಾಣದ ಹತ್ತಿರ ನಡೆದಿದೆ.

ಸಕಲೇಶಪುರ ಮೂಡಿಗೆರೆ ಮಾರ್ಗ ದಲ್ಲಿ ಸಂಚರಿಸುವ ಬಸ್ಸುಗಳು ಪ್ರತಿದಿನ ಒಂದಲ್ಲ ಒಂದು ಬಸ್ಸು ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತವೆ. ಈ ಮಾರ್ಗಕ್ಕೆ ಗುಣಮಟ್ಟದ ಬಸ್ಸುಗಳನ್ನು ಬಿಡದೆ ಸಾಕಷ್ಟು ಓಡಿರುವ ಹಳೆಯ ಬಸ್ಸುಗಳನ್ನು ಈ ಮಾರ್ಗದಲ್ಲಿ ಓಡಿಸುತಿರುವುದರಿಂದ ಈ ಒಂದು ಪರಿಸ್ಥಿತಿ ಎದುರಾಗುತ್ತಿದೆ ಎಂದು ಪ್ರಯಾಣಿಕರು ಹಾಗೂ ಸಾರ್ವಜನಿಕರು ದೂರಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *