
ಸಕಲೇಶಪುರ : ಇಂದು ಪಟ್ಟಣದ ಹಲವು ಬಡಾವಣೆಗಳಿಗೆ ಪ್ರವಾಸ ಕೈಗೊಂಡು ಖುದ್ದು ವೀಕ್ಷಣೆ ಮಾಡಿ ನಂತರ ಹೌಸಿಂಗ್ ಬೋರ್ಡ್ ಬಡಾವಣೆಗೆ ಭೇಟಿ ನೀಡಿ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್ ಅವರು ಪಟ್ಟಣದ ಪುರಸಭಾ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ಪಾರ್ಕ್‌ಗೆ ಬಿಟ್ಟಿರುವ ಜಾಗಗಳಲ್ಲಿ ಪಾರ್ಕ್ ನಿರ್ಮಾಣಗೊಂಡಿದ್ದರೂ ಸಹಿತಿ ನಿರ್ವಹಣೆಯ ಕೊರತೆಯಿಂದ ಬಡಾವಣೆಯ ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ,
ಇನ್ನೂ ಹಲವು ಬಡಾವಣೆಗಳಲ್ಲಿ ರಸ್ತೆ, ಚರಂಡಿ ಮತ್ತು ಮೂಲಭೂತ ಸಮಸ್ಯೆಗಳು ವ್ಯಾಪಕವಾಗಿ ಕಂಡುಬಂದಿದ್ದು ಇಂದು ಪುರಸಭಾ ಮುಖ್ಯಾಧಿಕಾರಿಗಳ ಜೊತೆಯಲ್ಲಿ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ವಿಶೇಷವಾಗಿ ಹೌಸಿಂಗ್ ಬೋರ್ಡ್ ಬಡಾವಣೆ 2002 ರಲ್ಲಿ ಪುರಸಭೆಗೆ ಹಸ್ತಾಂತರವಾದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ಈ ಬಡಾವಣೆಯಲ್ಲಿ ನಡೆಯದ ಕಾರಣ ಇಲ್ಲಿನ ಪಾರ್ಕ್, ತಡೆಗೋಡೆ, ಚರಂಡಿ, ಆಟದ ಮೈದಾನಕ್ಕೆ ಮತ್ತು ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ನೀರಿನ ಟ್ಯಾಂಕ್ ಶಿಥಿಲಾವಸ್ತೆ ತಲುಪಿದ್ದು
ಇಲ್ಲಿಯ ಬಡಾವಣೆಗೆ ಓವರ್ ಹೆಡ್ ಟ್ಯಾಂಕ್‌ನ ಅವಶ್ಯಕತೆ ಇದ್ದು ಈ ಎಲ್ಲಾ ಕೆಲಸಗಳಿಗೆ ಹೆಚ್ಚು ಹೊತ್ತು ಕೊಡುವ ಮೂಲಕ ಕೆಲಸ ಮಾಡಲಾಗುವುದು ಎಂದ ಅವರು ಹಲವು ಬಡಾವಣೆಗಳಲ್ಲಿ ಅಂಗನವಾಡಿ, ಶಾಲೆ, ಆಟದ ಮೈದಾನ, ಪಾರ್ಕ್, ಉದ್ದೇಶಕ್ಕೆ ಬಿಟ್ಟಿರುವ ನಿವೇಶನಗಳು ಅನ್ಯರ ಹೆಸರಿಗೆ ಖಾತೆ ಮಾಡಿರುವುದು ಗಮನಕ್ಕೆ ಬಂದಿದ್ದು ಅಂತವುಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ವರಪ್ಪ, ಇಂಜಿನಿಯರ್ ಸುಜಾತ, ಬಿಜೆಪಿ ಪಕ್ಷದ ಮುಖಂಡರಾದ ಸುದೀಶ್, ಲೋಕೇಶ್ ಬಡಾವಣೆಯ ನಿವಾಸಿಗಳು ಹಾಜರಿದ್ದರು.
