
ಸಕಲೇಶಪುರ : ತಾಲೂಕು ಉದೆವಾರ, ಹೆಬ್ಬನಹಳ್ಳಿ, ಹೊಸಕೊಪ್ಪಲು, ಸಿಡಿಗಳಲೆ, ಬೆಳಗೋಡು, ಗ್ರಾಮಗಳಿಗೆ ತೆರಳುವ ಮಾರ್ಗದ ಬದಿಗಳಲ್ಲಿ ಬೃಹತ್ ಗಾತ್ರದ ಮರಗಳು ಬೀಳುವ ಹಂತದಲ್ಲಿದ್ದುದನ್ನು ವರದಿ ಮಾಡಲಾಗಿತ್ತು ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಮರದ ರೆಂಬೆಗಳನ್ನು ಕೆಲವುಗೊಳಿಸಿದ್ದು ಶಾಲೆಗೆ ತೆರಳುವಂತ ಪುಟ್ಟ ಮಕ್ಕಳಿಗೆ ಮತ್ತು ಬಸ್ ಸಂಚಾರಕ್ಕೆ ಮತ್ತು ಕಾಫಿ ತೋಟದ ಕಾರ್ಮಿಕರಿಗೆ ಮತ್ತು ರೈತರಿಗೆ ರಸ್ತೆ ಬದಿಯಲ್ಲಿದ್ದಂತಹ ಅಕೇಶಿಯ ಮರದ ಕೊಂಬೆಗಳನ್ನು ತೆರೆದು ಗೊಳಿಸಿದ್ದಾರೆ
ಮಲೆನಾಡು ರಕ್ಷಣಾ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೋಪಲು ಅವರ ಮನವಿ ಮೇರೆಗೆ ಮತ್ತು ಟಿವಿ 46 ಸಕಲೇಶಪುರ ವರದಿಯಿಂದಾಗಿ ರಸ್ತೆ ಬದಿಗೆ ಬಾಗಿದಂತಹ ಅಕೆಶಿಯ ಮರ ಮತ್ತು ಒಣ ಮರಗಳನ್ನು ತೆರವುಗೊಳಿಸಿದ ಸಕಲೇಶಪುರದ ಅರಣ್ಯ ಅಧಿಕಾರಿಗಳಾದಂತಹ RFO ಹೇಮಂತ್ ಮತ್ತು ಬೆಳಗೋಡು ವಲಯದ ಮಂಜುನಾಥ್ ಅವರಿಗೆ ಮಲೆನಾಡು ರಕ್ಷಣಾ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಅವರು ಅರಣ್ಯ ಅಧಿಕಾರಿಗಳ ಕಾರ್ಯ ವೈಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




