
ಸಕಲೇಶಪುರ : ನಗರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಕಲೇಶಪುರ ತಾಲ್ಲೂಕು ರಂಗ ಸಂಜೆ ಸತ್ಯಶೋಧನ ರಂಗ ಸಮಾಜ ಹೆಗ್ಗೋಡು (ರಿ) ಅವರ ಜನಮನದಾಟ ರಂಗ ತಂಡದಿಂದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ಕಾಕ್ ಅವರ ಕೃತಿ ಎದೆಯ ಹಣತೆ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಮಾಯಾಮೃಗ ಅವರ ಕೃತಿಗಳನ್ನಾಧರಿಸಿದ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್, ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ, ರಂಗಕರ್ಮಿ ಪ್ರಸಾದ್ ರಕ್ಷಿದಿ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಾರದ ಗುರುಮೂರ್ತಿ, ಕಾರ್ಯದರ್ಶಿ ಯೋಗೇಶ್, ಕೋಶ ಅಧ್ಯಕ್ಷರು ನಲ್ಲುಲ್ಲಿ ಸತೀಶ್ ಮತ್ತು ಪದಾಧಿಕಾರಿಗಳು, ವೀರಶೈವ ಮುಖಂಡರಾದ ಯಡೆಹಳ್ಳಿ ಮಂಜುನಾಥ, ಮಾಯಾಮೃಗ ನಾಟಕದ ನಿರ್ದೇಶಕರಾದ ರಂಜಿತ್ ಶೆಟ್ಟಿ ಕುಕ್ಕುಡೆ, ಜನಮನ ದಾಟದ ವ್ಯವಸ್ಥಾಪಕರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.





