
ಸಕಲೇಶಪುರ : “ಸರ್ಕಾರದ ಅನುದಾನದಡಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಿ. ಸರ್ಕಾರಕ್ಕೆ ಮುಜುಗರ ತಂದಿರುವ ಯಸಳೂರು ವಲಯಾರಣ್ಯಾಧಿಕಾರಿಗಳಾದ ಕೃಷ್ಣರವರ ಮೇಲೆ ಕ್ರಮ ಜರುಗಿಸುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶೋಭರಾಜ್ ರವರು ಕಳೆದ 6 ವರ್ಷಗಳಿಂದಲೂ ಯಸಳೂರು ವ್ಯಾಪ್ತಿಯ ಯಸಳೂರು ಸ.ನಂ. 361 ರಲ್ಲಿ 2021-22 ನೇ ಸಾಲಿನಲ್ಲಿ ಡಾ।।ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ” ಯಡಿಯಲ್ಲಿ ತನ್ನ ಪತ್ನಿ ಪ್ರಿಯಾ ಡಿ.ಕೆ ರವರ ಹೆಸರಿನಲ್ಲಿ ಸರ್ಕಾರದ ಅನುದಾನ ಪಡೆದು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಅರಣ್ಯ ಇಲಾಖೆಯ ಮರಗಳನ್ನು ಕಡಿದಿದ್ದಾನೆಂದು ನೆಪವೊಡ್ಡಿ ದಿನಾಂಕ: 03-07-2025ರಂದು ಸಂಜೆ ಮನೆಗೆ ಬಂದು ರಕ್ತ ಬರುವಂತೆ ಹೊಡೆದು, ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆಸಿ ವಾಪಾಸ್ಸು ಕಳಿಸಿ, ದಿನಾಂಕ:04-07-2025 ರಂದು ಅರಣ್ಯ ಇಲಾಖಾಧಿಕಾರಿಗಳಾದ ಕೃಷ್ಣರವರು ತನ್ನ ಇಲಾಖೆಯ ಸಿಬ್ಬಂದಿಗಳೊಂದಿಗೆ ಜೆ.ಸಿ.ಬಿ ತೆಗೆದುಕೊಂಡು ಹೋಗಿ ಮನೆಯನ್ನು ನೆಲಸಮಗೊಳಿಸಿರುತ್ತಾರೆ.
ಮನೆ ಕೆಡವಿ ” ನಾನು ಸರ್ಕಾರದ ಸಹಾಯಧನ ಪಡೆದು, ಅದಕ್ಕೆ ಕೂಲಿ ಮಾಡಿ, ಸಾಲ ಮಾಡಿ ಹಣ ಕೂಡಿಸಿ ಮಾಡಿದ್ದ ಮನೆಯನ್ನು ಕೆಡವಿ ಸರ್ಕಾರಕ್ಕೆ ಮುಜುಗರ ತಂದಿರುತ್ತಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಿನಾಂಕ: 04-07-2025 ರಂದು ದೂರನ್ನು ಕೂಡ ದಾಖಲು ಮಾಡಿರುತ್ತಾರೆ ಮತ್ತು ಕೇಳಲು ಹೋದ ಮುಖಂಡರ ಮೇಲೂ RFO ರವರು ಪ್ರಕರಣ ದಾಖಲಿಸಿರುತ್ತಾರೆ.
ಈ ಎಲ್ಲಾ ಘಟನೆಗಳಿಂದ ಸರ್ಕಾರಕ್ಕೆ ಮುಜುಗರ ತಂದಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರಬೇಕೆಂಬ ಉದ್ದೇಶದಿಂದಲೇ ದಲಿತರ ಮೇಲೆ ದೌರ್ಜನ್ಯ ವೆಸಗಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು. ಅರಣ್ಯ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.



