
ಹಾಸನ : ಸಕಲೇಶಪುರ ತಾಲ್ಲೂಕು ಎಆರ್‌ಟಿಓ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ದಲ್ಲಾಳಿ ಮೋಹನ್ ಶೆಟ್ಟಿ ಎಂಬ ವ್ಯಕ್ತಿಯ ಹುಟ್ಟುಹಬ್ಬವನ್ನು ಎ ಆರ್ ಟಿ ಓ ಮಧುರ ಹಾಗೂ ಕಚೇರಿಯ ಇತರೆ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಸೇರಿ ಸಾರ್ವಜನಿಕ ಕೆಲಸದ ಸಮಯದಲ್ಲಿ ಸಾರ್ವಜನಿಕರಿಗೆ ಅಡಚಣೆ ಮಾಡುವ ಮೂಲಕ ದಲ್ಲಾಳಿ ಮೋಹನ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಶಾಲು ಹಾರ ತುರಾಯಿ ಹಾಗೂ ಕೇಕ್ ಕತ್ತರಿಸುವ ಮೂಲಕ ಹಾಗೂ ಕಚೇರಿಯ ಒಳಭಾಗದಲ್ಲಿ ಬಿರಿಯಾನಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಾರೆ
ಈ ಸಂಬಂಧವಾಗಿ ಎಲ್ಲಾ ಪತ್ರಿಕ ಮಾಧ್ಯಮದಲ್ಲಿ ಹಾಗೂ ದೂರದರ್ಶನಗಳಲ್ಲಿ ಸುದ್ದಿ ಈಗಾಗಲೇ ಪ್ರಸಾರವಾಗಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ಸಹ ನಮ್ಮಲ್ಲಿ ಇರುತ್ತದೆ ಆದ್ದರಿಂದ ತಾವುಗಳು ಈ ಅಧಿಕಾರಿಗಳನ್ನು ತತ್ತಕ್ಷಣ ಅಮಾನತುಗೊಳಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಹಾಗೂ ಜಿಲ್ಲೆಯ ಗೌರವವನ್ನು ಕಾಪಾಡಬೇಕು ಎಂದು ಮನವಿ ಸಲ್ಲಿಸಿದರು.

