
” ಭಾವನೆಗಳ ಧ್ವನಿ ” ಕವನ ಸಂಕನಲ ಬಿಡುಗಡೆ
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಸುರಕ್ಷಾಧಿಕಾರಿಯಾಗಿ ಕಾರ್ಯನಿರ್ವಾಹಿಸುತ್ತಿರುವ ತಾಸೀನಾ ರಜಾಕ್ ರವರ ಪ್ರಥಮ ಕವನಸಂಕಲನ ಭಾವನೆಗಳ ಧ್ವನಿ ಕೃತಿಯನ್ನು ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಮಮತ ಜಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಸೀನಾ ರಜಾಕ್ ರವರ ತಾಯಿ ಶಾಕೀರಾ ಖಾನಂ ರವರು ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಾಹಿತಿ ಪಲ್ಲವಿ ಬೇಲೂರು , ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ಡಾ. ಅನುಪಮ , ಡಾ. ಅಕ್ಷತ್ , ಕಮಲಮ್ಮ , ವಿಶ್ವಾಸ್ ಡಿ. , ನಿರಂಜನ್ ಎ.ಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು , ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.
