
ಗಂಡಸಿ ಪೊಲೀಸ್ ಠಾಣೆ ವತಿಯಿಂದ ಯಶಸ್ವಿ ಕಾರ್ಯಚಾರಣೆ 🐂🐂
ಅರಸೀಕೆರೆ : ತಾಲ್ಲೂಕಿನ ಗಂಡಸಿ ಪೊಲೀಸ್ ಠಾಣೆ ವತಿಯಿಂದ ಅರಸೀಕೆರೆ ಗಂಡಸಿ ಮಾರ್ಗದಲ್ಲಿ ಗಂಡಸಿ ಇಂದ ಹಿಂದೆ ದಾಸನಹಳ್ಳಿ ಗೇಟ್ ಹತ್ತಿರ ಶನಿದೇವರ ದೇವಸ್ಥಾನದ ಹತ್ತಿರ ಮುಬಾರಕ್ ಎಂಬುವವರ ಶೆಡ್ಡಿನಲ್ಲಿ 49 ಹಸುವಿನ ಸಣ್ಣಕರುಗಳನ್ನು ಬಾಯಿ ಮತ್ತು ಕಾಲನ್ನು ಕಟ್ಟಿ ಕುಡಿ ಹಾಕಿರಲಾಗಿತ್ತು
ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಮಹೇಂದ್ರ ಸ್ಕಾರ್ಪಿಯೋ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
(KA 18 N 4660) ಗಂಡಸಿ ವೃತ್ತದಲ್ಲಿ 49 ಕರುಗಳನ್ನು ಕಸಾಯಿ ಖಾನೆಗೆ ರವಾನಿಸಲು ಸಂಗ್ರಹಿಸಲಾಗಿರುತ್ತದೆ.
ಈ ಸಂಗ್ರಹಿಸಿದ ಕರುಗಳನ್ನು ಹಾಗೂ ಶೆಡ್ಡನ್ನು ಗಂಡಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಹಾಲಪ್ಪನವರು ಈ ಕೃತ್ಯವನ್ನು ಭೇದಿಸಿರುತ್ತಾರೆ.
ಗಂಡಸಿ ಪೊಲೀಸ್ ಠಾಣಾ ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ಧನ್ಯವಾದಗಳು ಇಂತಿ : ಭಾರತೀಯ ಗೋಪಾರಿವಾರ ಚಾರಿಟೇಬಲ್ ಟ್ರಸ್ಟ್ ಅರಸೀಕೆರೆ.
