ಸಕಲೇಶಪುರ : ಆಲೂರು ತಾಲ್ಲೂಕು ಮಡಬಲು ಗ್ರಾಮದ ದಿವಾಕ‌ರ್ ಗೌಡ ಎಂಬ ಬಾಲಕನು ಸಕಲೇಶಪುರ ತಾಲ್ಲೂಕಿನ ಬಾಳುಪೇಟೆಯ ಬ್ಲಾಸಮ್ ಶಾಲೆಯಲ್ಲಿ ಒಂದನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ ಕೆಲ ದಿನಗಳಲ್ಲಿ ಈ ಬಾಲಕನಿಗೆ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹೊಡೆದಿರುವ ಘಟನೆ ನಡೆದಿದ್ದು, ಇದು ಗೊತ್ತಾದ ನಂತರ ಎಲ್ಲಾ ಮಕ್ಕಳ ಹೆತ್ತವರಲ್ಲೂ ಭಯ ಹುಟ್ಟಿಸಿದೆ.

ಇಂತಹ ಪ್ರಕರಣಗಳು ಶಾಲಾ ಮಕ್ಕಳ ಆತ್ಮವಿಶ್ವಾಸವನ್ನು ಕೆಡಿಸುತ್ತವೆ ಹಾಗೂ ಶಾಲೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತವೆ.ಆದ ಕಾರಣದಿಂದ, ನಾವು ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ, ಸಕಲೇಶಪುರ ನಿಮ್ಮಲ್ಲಿ ವಿನಂತಿಸುತ್ತೇವೆ.

1. ಸಂಬಂಧಪಟ್ಟ ಶಿಕ್ಷಕಿ ಮತ್ತು ಶಾಲಾ ಮುಖ್ಯಸ್ಥರ ಮೇಲೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.

2. ದಿವಾಕರ್ ಗೌಡನಿಗೆ ತಕ್ಷಣವೇ ಉತ್ತಮ ಚಿಕಿತ್ಸೆಯು ದೊರಕುವಂತೆ ಮಾಡಬೇಕು.

3. ಮಕ್ಕಳ ರಕ್ಷಣೆಗೆ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು.

ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಸಿಗುವಂತೆ ಕ್ರಮವಹಿಸುತ್ತೀರಿ ಎಂಬ ನಂಬಿಕೆಯಿಂದ ಈ ಮನವಿಯನ್ನು ನೀಡುತ್ತಿದ್ದೇನೆ .

ವಂದನೆಗಳೊಂದಿಗೆ, ಗಗನ್ ಹಾಡ್ಲಹಳ್ಳಿತಾಲ್ಲೂಕು ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ತಾಲೂಕು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *