
ಸಕಲೇಶಪುರ : ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಗುರುವಾರ ಹೆತ್ತೂರು ಹಾಗೂ ಯಸಳೂರು ಹೋಬಳಿಯ ಚಿಕ್ಕಂದೂರು. ಉಚ್ಚಂಗಿ. ಬ್ಯಾಗಡಹಳ್ಳಿ. ಹೊಂಗಡ ಹಳ್ಳ. ಹಿರಿದನಹಳ್ಳಿ. ಮರಜನಹಳ್ಳಿ. ಕರಡಿಗಾಲ ಗ್ರಾಮಗಳಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಹೆಚ್. ಕೆ. ಕುಮಾರಸ್ವಾಮಿ ರವರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಉಜ್ಮರೋಜ್ಮಿ ಸುದರ್ಶನ್ ರವರು, ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್ ರವರು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜುರವರು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜೇಗೌಡರು, ಟಿಎಪಿಎಂಸಿ ನಿರ್ದೇಶಕರು ಮತ್ತು ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕರಗೂರು ರಮೇಶ್ ರವರು , ಗೊದ್ದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೌಶಿಕ್ ರವರು, ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು, ಅಧ್ಯಕ್ಷರು ಸದಸ್ಯರುಗಳು ಪಕ್ಷದ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು.






