ತೆಂಗಿವಿನಲ್ಲಿ ಘೇಂಡಾಮೃಗ ನಿರ್ವಹಣೆ

ಹಾಸನ : ಗ್ರಾಮೀಣ ಕೃಷಿ ಕಾರ್ಯಾಣಭವ ಶಿಬಿರ 2025-26, ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಚಾಕನಹಳ್ಳಿ ಹಾಗೂ ಸಣ್ಣ ಚಾಕನಹಳ್ಳಿಯ ತೆಂಗಿನ ತೋಟದಲ್ಲಿ, ತೆಂಗುವಿನಲ್ಲಿ ಘೇಂಡಾಮೃಗ ದುಂಬಿ (Rhinoceros beetle) ನಿರ್ವಹಣೆಯ ಕುರಿತು ಕಾರ್ಯಕ್ರಮವನ್ನು ದಿನಾಂಕ : 22/7/2025 ಹಮ್ಮಿಕೊಳ್ಳಲಾಗಿತ್ತು.

ಶಿಬಿರಾರ್ಥಿಗಳಾದ ಕುಮಾರಿ ಸ್ಮಿತಾ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಸ್ತುತ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ|| ಸೌಮ್ಯ ಸಹಾಯಕ ಪ್ರಾಧ್ಯಾಪಕಿ ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ರವರು ಮಾತನಾಡಿ, ತೆಂಗುವಿನಲ್ಲಿ ಮುಖ್ಯ ಕೀಟ ಬಾಧೆಯಾಗಿರುವ ಘೇಂಡಾಮೃಗ ದುಂಬಿ ಬಗ್ಗೆ ಸವಿವರವಾಗಿ ಮಾತನಾಡಿ ರೈತರಿಗೆ ಪ್ರಾತ್ಯಕ್ಷಿತವಾಗಿ ಅದರ ನಿರ್ವಹಣೆಯನ್ನು ತೋರಿಸಿ ಮತ್ತು ತೆಂಗು ಬೆಳೆಗಾರರ ಅನೇಕ ಪ್ರಶ್ನೆಗಳಿಗೆ ಉತ್ತಮವಾದ ಸಲಹೆಯನ್ನು ಹಾಗೂ ಸಂಬಂಧಪಟ್ಟ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಿಂದ ತೆಂಗು ಬೆಳೆಗಾರರ ಬೆಳೆಗಾರರಾದ ಪ್ರಕಾಶ್ ,ಲಕ್ಷ್ಮಿ ಗೌಡ ,ಶಂಕರೇಗೌಡ ,ಕಾರ್ತಿಕ್, ರಘು ,ಮಂಜೇಗೌಡ ಹಾಗೂ ಇತರೆ ರೈತರು ಭಾಗವಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *