
ಸಕಲೇಶಪುರ: ಪಟ್ಟಣದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಕಲೇಶಪುರ ಹಾಗೂ ಆಲೂರು ಉಪವಿಭಾಗಾದ ಸೆಸ್ಕಾಂ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಶಾಸಕರು ಪ್ರತಿಯೊಬ್ಬ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊದಲಿಗೆ ಮೊಬೈಲ್ ಸ್ವಿಚ ಆಫ್ ಮಾಡಿಕೊಳ್ಳದೆ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಲು ಮುಂದಾಗಬೇಕು.
ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುವುದರ ಜೊತೆಗೆ ಸಾರ್ವಜನಿಕರೊಡನೆ ವಿನ್ರಮವಾಗಿ ಮಾತನಾಡಬೇಕು ಇದರಿಂದ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಮರದ ರೆಂಬೆಗಳು ವಿದ್ಯುತ್ ವೈರ್‌ಗಳ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಸಾಮಾನ್ಯ, ನನಗೆ ಸಾರ್ವಜನಿಕರಿಂದ ಬರುವ ಸಮಸ್ಯೆಗಳ ಕರೆಗಳಲ್ಲಿ ಶೇ. 50% ಸೆಸ್‌ಕ್ಗೆ ಸಂಬಂದಪಟ್ಟಂತೆ ಇರುತ್ತದೆ.
ಮುಂದಿನ ವರ್ಷದಲ್ಲಿ ಅರಣ್ಯ ಇಲಾಖೆಯವರೊಡನೆ ಪ್ರತಿಯೊಬ್ಬ ಸೆಸ್‌ಕ್ ಅಧಿಕಾರಿಗಳು ಸಂಪರ್ಕ ಮಾಡಿ ಮಳೆಗಾಲ ಆರಂ‘ವಾಗುವ ಮೊದಲೆ ಸಾಧ್ಯವಾದಷ್ಟು ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆ ಮರಗಳ ರೆಂಬೆಗಳನ್ನು ತೆರವುಗೊಳಿಸಲು ಮುಂದಾಗಬೇಕು.
ಇದರಿಂದ ಶೇ.50% ರಷ್ಟು ಸಮಸ್ಯೆ ಬಗೆಹರಿಯುತ್ತದೆ. ಅಭಿಯಂತರರು ಎಲ್ಲೊ ಒಂದು ಕಡೆ ಕೂತುಕೊಂಡು ಕೆಲಸ ಮಾಡಬಾರದು ತಮ್ಮ ವ್ಯಾಪ್ತಿಯ ಎಲ್ಲಾ ಕಡೆ ಸಂಚರಿಸಬೇಕು. ಆಗ ಸಮಸ್ಯೆಗಳು ಅರಿವಿಗೆ ಬರುತ್ತದೆ. ವಿದ್ಯುತ್ ಕಂಬಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸರಿಯಾಗಿ ಗಮನವರಿಸಬೇಕು. ಆಗ ಮುಂದಾಗುವ ಅನಾಹುತದ ಕುರಿತು ಗಮನಹರಿಸಲು ಸಾಧ್ಯ,
ಬಗೆಹರಿಸಲಾಗದ ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಅವರಿಂದಲೂ ಬಗೆಹರಿಸಲು ಸಾಧ್ಯವಿಲ್ಲದಿದ್ದಲ್ಲಿ ಅವರು ನನ್ನ ಗಮನಕ್ಕ ತರಬೇಕು, ನಾನು ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೆ ರೀತಿಯಲ್ಲಿ ಅಡಚಣೆ ಮಾಡಬಾರದು, ಒಟ್ಟಾರೆಯಾಗಿ ವಿದ್ಯುತ್ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು ವಿದ್ಯುತ್ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ.
ಈ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು ಹಾಗೂ ವಿದ್ಯುತ್ ಗುತ್ತಿಗೆದಾರರ ಕಡತಗಳನ್ನು ಉಳಿಸಿಕೊಳ್ಳಬಾರದು, ಅವರ ಬಿಲ್‌ಗಳನ್ನು ಕೂಡಲೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಒಟ್ಟಾರೆಯಾಗಿ ಸಾರ್ವಜನಿಕರ ಕೆಲಸಗಳನ್ನು ಕಾಲಹರಣ ಮಾಡದೆ ಮಾಡಿಕೊಡಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಸೆಸ್‌ಕ್ ಹಾಸನ ವೃತ್ತದ ಮುಖ್ಯ ಅಭಿಯಂತರ ಕಾಂತರಾಜು, ಸಕಲೇಶಪುರ ಉಪವಿಭಾಗಾದ ಕಾರ್ಯನಿರ್ವಾಹಕ ಅಭಿಯಂತರ ಅರ್ಜುನ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರೇಮ್‌ನಾಥ್, ಪದಾಧಿಕಾರಿಗಳಾದ ಗಿರೀಶ್, ಆನಂದ್ ಲಿಯೋ ವ್ಯಾಸ್, ಮೋಹನ್ ಮುಂತಾದವರು ಉಪಸ್ಥಿತರಿದ್ದರು.
