
ಸಕಲೇಶಪುರ: ಜುಲೈ 29:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಕಲೇಶಪುರ ವತಿಯಿಂದ “ಜನಪದ ಜಂಗಮ” ಡಾ. ಎಸ್. ಕೆ. ಕರೀಂ ಖಾನ್ ರವರ 19ನೇ ವರ್ಷದ ನುಡಿನಮನ ಕಾರ್ಯಕ್ರಮ ಜುಲೈ 29, ಮಂಗಳವಾರ ಬೆಳಿಗ್ಗೆ 10.30ಕ್ಕೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ವಿ.ಪಿ. ರಮೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನದ ಪ್ರಮುಖರಾದಅರ್ಚನಾ ಜಯಂತ್ , ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್, ಎಸ್.ಡಿ. ಆದರ್ಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜುನಾಥ್,ಚೇತನ್, ಹರೀಶ್, ರಾಕೇಶ್, ಅಕ್ಬರ್ ಜುನೈದ್, ಪುರಸಭೆ ನಾಮಿನಿ ಸದಸ್ಯೆ ಬಿಲ್ಕಸ್ ರಾಣಿ ಸಾಯಿರಾ ಬಾನು, ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳುಉಪಸ್ಥಿತರಿದ್ದರು.



