ಆಲೂರು : ತಾಲ್ಲೂಕಿನ ಕೆ . ಹೊಸಕೋಟೆ – ಮಗ್ಗೆ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ನಿರಂತರ ಆರು -ಏಳು ದಿನಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಸುತ್ತಮುತ್ತಲಿನ ರೈತ ಮುಖಂಡರುಗಳು ಮಗ್ಗೆ ಸೆಸ್ಕ್ ಕಚೇರಿ ಮುಂಭಾಗ ಜೂನಿಯ‌ರ್ ಇಂಜಿನಿಯರ್ ಹಾಗೂ ಸಿಬ್ಬಂದಿಗಳವಿರುದ್ಧ ಪ್ರತಿಭಟನೆ ನಡೆಸಿದರು.

ಸಕಲೇಶಪುರ ವಿಭಾಗ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಜಿ.ಎಂ.ಅರ್ಜುನ್ ಹಾಗೂ ಆಲೂರು ಸೆಸ್ಕಂ ಸಹಾಯಕ ಕಾರ್ಯಪಾಲಕ ರಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿ ವಿದ್ಯುತ್ ಸಮಸ್ಯೆ ಹಾಗೂ ದೂರಿರುವ ಅಧಿಕಾರಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕರರು ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಕೆ. ಹೊಸಕೋಟೆ ರೈತ ಸಂಘಟನೆಯ ಕಾರ್ಯದರ್ಶಿ ಜಯಣ್ಣ ಹೈದೂರು,ತಾ. ಪಂ. ಮಾಜಿ ಉಪಾಧ್ಯಕ್ಷ ಕೆ ಎನ್ ಕಾಂತರಾಜು, ಮಲ್ಲಾಪುರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ಕಾಗನೂರು, ರೈತ ಸಂಘಟನೆಯ ಮುಖಂಡರುಗಳಾದ, ಚರಣ್, ಅಪ್ಪು, ಪ್ರವೀಣ್, ಸ್ಟಾಲಿನ್, ಸುಭಾಷ್, ರತ್ನ, ನಿಂಗರಾಜು, ದೀಪಕ್ ಅಣ್ಣಪ್ಪ ಸೇರಿದಂತೆ ಹಲವರು ಮುಖಂಡರು ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *