ಸಕಲೇಶಪುರ : ಸಮಾಜಶಾಸ್ತ್ರ ಉಪನ್ಯಾಸಕ ಸಂತೋಷ ಎಸ್.ಎ .ಇವರು ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಸಂತೋಷ ಎಸ್.ಎ. ಇವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಿll ಅಣ್ಣಪ್ಪ. ಟಿ ಮತ್ತು ಶ್ರೀಮತಿ ಶಿವಮ್ಮ ಇವರ ಪುತ್ರರಾಗಿದ್ದು ಇವರು ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ (ನಿವೃತ್ತ) *ಡಾ. ಎ ರಾಮೇಗೌಡ* ಇವರ ಮಾರ್ಗದರ್ಶನದಲ್ಲಿ *”ತಾಂತ್ರಿಕ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಮಹಿಳಾ ವಿದ್ಯಾರ್ಥಿಗಳು : ಸಮಾಜ ಶಾಸ್ತ್ರೀಯ ಅಧ್ಯಯನ(ವಿಶೇಷವಾಗಿ ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ)”* ಎಂಬ ವಿಷಯ ಕುರಿತಾಗಿ ವಿಸ್ತೃತ ಪ್ರಬಂಧ ಮಂಡಿಸಿದರು.

ಈ ಸಂಶೋಧನಾ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಪಿ .ಹೆಚ್.ಡಿ ಪ್ರಬಂಧಕ್ಕೆ ಅಂಗೀಕರಿಸಿದ್ದು ಮುಂದೆ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಗುವುದು ಎಂದು ಕುವೆಂಪು ವಿಶ್ವವಿದ್ಯಾನಿಲಯ ಕುಲ ಸಚಿವರಾದ (ಮೌಲ್ಯಮಾಪನ) ಪ್ರೊ. ಎಸ್. ಎಂ .ಗೋಪಿನಾಥ್ ರವರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *