
ಸಕಲೇಶಪುರ : ಪಟ್ಟಣದ 7ನೇ ವಾರ್ಡಿನ ಅಂಗನವಾಡಿಯಲ್ಲಿ ಮಾನವ ಬಂದುತ್ವ ವೇದಿಕೆಯು ನಾಗರ ಪಂಚಮಿಯ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಹಾಲು ಹಾಗೂ ಬಿಸ್ಕೆಟ್‌ಗಳನ್ನು ವಿತರಿಸಿ, ಮಾತನಾಡಿ, ಹಬ್ಬವನ್ನು ಸಾರ್ಥಕವಾಗಿ ಆಚರಿಸಲು, ಈ ಕಾರ್ಯಕ್ರಮವು ಸಾಂಪ್ರದಾಯಿಕ ಆಚರಣೆಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ತಂದು, ಸಮಾಜಕ್ಕೆ ಮಾದರಿಯಾಗಿ, ಕಳೆದ ಕೆಲವು ವರ್ಷಗಳಿಂದ ನಾವು ನಾಗರ ಪಂಚಮಿಯನ್ನು ಬಸವ ಪಂಚಮಿ ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದೇವೆ.ಎಂದರು.
ಸಾಂಪ್ರದಾಯಿಕವಾಗಿ ನಾಗರ ಪಂಚಮಿಯಂದು ಹಾವಿಗೆ ಹಾಲು ಹುತ್ತಕ್ಕೆ ಸುರಿಯುವ ಪದ್ಧತಿಯು ವೈಜ್ಞಾನಿಕವಾಗಿ ಸರಿಯಲ್ಲ. ಹಾವು ಮಾಂಸಾಹಾರಿ ಪ್ರಾಣಿಯಾಗಿದ್ದು, ಹಾಲು ಸೇವಿಸಲಾರದು. ಇದರಿಂದ ಹಾಲಿನ ಮೇಲೆ ಇರುವೆಗಳು ಬಂದು ಹಾವಿನ ಚರ್ಮಕ್ಕೆ ಗಾಯವಾಗಿ, ಅದು ಸಾಯುವ ಸಂಭವವೂ ಇದೆ ಎಂದು ಹೇಳಿದರು.ಹಾಲನ್ನು ವ್ಯರ್ಥ ಮಾಡುವ ಬದಲು, ಅದನ್ನು ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರವಾಗಿ ವಿತರಿಸುವುದು ಮಾನವೀಯ ಮತ್ತು ವೈಜ್ಞಾನಿಕವಾಗಿ ಸಮಂಜಸವಾದ ಕಾರ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು ಸಾಂಪ್ರದಾಯಿಕ ಆಚರಣೆಗಳನ್ನು ಪರಿವರ್ತಿಸಿ, ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಆನೆಮಹಲ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಿಮ್ಮಯ್ಯ, ಪತ್ರಕರ್ತ ಮಲೆನಾಡ್ ಮೆಹಬೂಬ್, ದಸಂಸ ಮುಖಂಡ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
