
ಹಾಸನ: ಗ್ರಾಮೀಣ ಸಹಭಾಗಿತ್ವ ಅಧ್ಯಯನ ಎಂಬುದು ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯಾಗಿದ್ದು, ನಿರ್ವಹಣೆಯಲ್ಲಿ ಗ್ರಾಮೀಣ ಜನರ ಜ್ಞಾನ ಮತ್ತು ಅಭಿಪ್ರಾಯಗಳನ್ನು ಸಂಯೋಜಿಸುವ ಒಂದು ಆಯುಧವಾಗಿದೆ. ಇದು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯನುಭವ ಶಿಬಿರ 2025-26ರ ಮೊದಲನೆ ಮೈಲುಗಲ್ಲಾಗಿದೆ.
ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಣೆ ವೇಳೆಯಲ್ಲಿ ಗಮನಿಸಿದ್ದ ಅಂಶಗಳನ್ನು ಕೇಂದ್ರಿಕರಿಸಿಕೊಂಡು ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮವನ್ನು ಸಜ್ಜುಗೊಳಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕೆ.ಬ್ಯಾಡರಹಳ್ಳಿ ಗ್ರಾಮದ ಸಾಮಾಜಿಕ, ಚಲನವಲನ ಮತ್ತು ಚಪಾತಿ ನಕ್ಷೆ, ಬೆಳೆ ಗೋಪುರ, ರೈತರ ಭೂ ಹಿಡುವಳಿ,ಬೆಳೆ ಮಾರಾಟ ವಾಹಿನಿಗಳು, ಸಮಸ್ಯೆ ಮತ್ತು ಪರಿಹಾರ ವೃಕ್ಷ, ಬೆಳೆಗಳಲ್ಲಿ ರೋಗ ಮತ್ತು ಕೀಟ ಬಾಧೆಯ ಗೋಪುರ, ಮತ್ತು ವಿವಿಧ ಕೃಷಿ ಆಧಾರಿತ ಉದ್ಯಮಗಳಲ್ಲಿ ರೈತರ ಆಸಕ್ತಿ ತಿಳಿಸುವ ಪ್ರಯತ್ನ ಹೀಗೆ ಮುಂತಾದ ವಿಷಯಗಳನ್ನು ವಿವಿಧ ನಕ್ಷೆ ಮತ್ತು ಚಟುವಟಿಕೆಗಳ ಮೂಲಕ ತೋರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೃಷಿ ಮಹಾವಿದ್ಯಾಲಯ ಹಾಸನದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ ಬಿ.ಟಿ. ಅವರು ಮಾತನಾಡಿ ಕಾರ್ಯಕ್ರಮವು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಸಹಭಾಗಿತ್ವ ಹಾಗು ಕೃಷಿಯ ವಿವಿಧ ವಿಷಯಗಳನ್ನು ಸಾರುತ್ತದೆ ಎಂದು ತಿಳಿಸಿದರು.
ಜೊತೆಗೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಶಿವಬಸಪ್ಪ ಕಂದ್ಕೂರ್, ರಾವೆ ಸಹಸಂಯೋಜಕಾರದ ಡಾ.ವಿನೋದ ಶಂಕರ ನಾಯಕ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
