
ಹಾಸನ – ದೊಡ್ಡ ಚಾಕನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಆಯೋಜಿಸಿದ್ದು 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜುಲೈ 28ರಂದು ಬೆಳಗ್ಗೆ 9:00ಗೆ ಡೈರಿ ಆವರಣದಲ್ಲಿ ನಡೆಯಿತು.
ಹಾಲು ಉತ್ಪಾದನೆ ಭಾರತದ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದೆ .ಈ ಹಿನ್ನೆಲೆಯಲ್ಲಿ ಅವರೊಂದಿಗೆ ನೇರ ಸಂವಾದ ನಡೆಸಿದರು.
ಇದರ ಉದ್ದೇಶ ಹಾಲು ಉತ್ಪಾದನೆಯ ಸ್ಥಿತಿ ಸವಾಲುಗಳು ಮತ್ತು ಸುಧಾರಣೆ ಮಾರ್ಗಗಳನ್ನು ಅರಿಯುವುದು .ಮುಖ್ಯ ಅತಿಥಿಗಳಾಗಿ ದೊಡ್ಡಬೀಕನಹಳ್ಳಿ ನಾಗರಾಜಣ್ಣ ,ನಿರ್ದೇಶಕರು ,ಹಾಸನ ಜಿಲ್ಲಾ ಸಹಕಾರ ಒಕ್ಕೂಟ . ನಳಿನ. ಜಿ .ರವರು ವಿಸ್ತರಣಾಧಿಕಾರಿಗಳು ಹಾ.ಸ.ಹಾ.ಒ.(ನಿ ). ಹಾಸನ ಸಭೆಯ ಉದ್ದೇಶ ಮಾತನಾಡಿದ್ದು. 2024 25ನೇ ಸಾಲಿನ ಅಡಿಟ್ ವರದಿಯನ್ನು ಉತ್ಪಾದನೆಯಾಗಿದ್ದು ಹೆಚ್ಚು ಹಾಲು ಉತ್ಪಾದನೆ ಮಾಡಲು ಸಹಕರಿಸಬೇಕೆಂದು ರೈತರ ಮನವಿ ಮಾಡಿದರು.
ಮುಂದುವರೆದು ಹಾಸನದಲ್ಲಿ ಮೆಗಾ ಡೈರಿಯನ್ನು ಸ್ಥಾಪಿಸುವ ಬಗ್ಗೆ ತಿಳಿಸಿದ್ದಾರೆ, ಮೆಗಾ ಡೈರಿಯು ದಿನಕ್ಕೆ ಸಾವಿರಾರು ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು .ವಿವಿಧ ಹಾಲು ಉತ್ಪನ್ನಗಳನ್ನು ತಯಾರಿಸಲು ಮತ್ತು ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಮತ್ತು ಈ ಕಾರ್ಯಕ್ರಮವನ್ನು ಕೃಷಿ ವಿದ್ಯಾರ್ಥಿಗಳು ನಡೆಸಿಕೊಡಲಾಗಿತ್ತು .
ಇದರ ನಿರ್ದೇಶಕರಾದ ಶ್ರೀಕುಮಾರ್, ದೊರೆಸ್ವಾಮಿ , ಹಿರೇಗೌಡ , ಚಂದ್ರೇಗೌಡ, ರಂಗಯ್ಯ , ಮತ್ತಿತರು ಉಪಸ್ಥಿತರಿದ್ದರು.
ಇದರ ಕಾರ್ಯದರ್ಶಿಯಾಗಿ ಅಶ್ವತ್. ಈ ಸಂವಾದವು ಹಾಲು ಉತ್ಪಾದನೆ ಕ್ಷೇತ್ರದ ನೈಜ ಸ್ಥಿತಿಗತಿಯ ಬಗ್ಗೆ ಸ್ಪಷ್ಟತೆ ನೀಡಿದ್ದು.
