
ಹಾಸನ : ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಮಂಡ್ಯ, ಕೃಷಿ ಮಹಾ ವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಬಿ. ಎಸ್. ಸಿ (ಹಾನರ್ಸ್ ) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ತಾಲೂಕಿನ ಕೆ ಆಲದಹಳ್ಳಿಯಲ್ಲಿ ಗ್ರಾಮೀಣ ಸಹಾಭಾಗಿತ್ವ ಅಧ್ಯಯನವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಅತಿಥಿಗಳಾದ ಡಾ | ಕೃಷ್ಣ ಪ್ರಸಾದ್ ಬಿ. ಟಿ, ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ,ಡಾ |ಶಿವಬಸಪ್ಪ ಕಂದಕೂರ್, ಕೃಷಿ ಇಂಜಿನಿಯರಿಂಗ್ ವಿಭಾಗ, ಡಾ | ವಿನೋದಾ ಶಂಕರ ನಾಯಕ್, ಕೃಷಿ ವಿಸ್ತರಣಾ ವಿಭಾಗ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮಸ್ಥರ ಭಾಗವಹಿಸುವಿಕೆ ಆಗಿತ್ತು. ಇದರ ಅಂಗವಾಗಿ ಸಂಪನ್ಮೂಲ ನಕ್ಷೆ, ಸಾಮಾಜಿಕ ನಕ್ಷೆ, ಸಮಯವಾರು ನಕ್ಷೆ, ದೈನಂದಿನ ಚಟುವಟಿಕೆ ನಕ್ಷೆ,ಚಪಾತಿ ನಕ್ಷೆ, ಕೃಷಿ ಕುಟುಂಬ ನಕ್ಷೆ, ಬೆಳೆ ಋತುಮಾನ ಚಕ್ರ, ಚಲನ ವಲನ ನಕ್ಷೆ, ಸಂಪತ್ತು ಶ್ರೇಣಿ, ಮಾರಾಟದ ಮಾರ್ಗಗಳು, ಪರಿಹಾರ ವೃಕ್ಷ, ಸ್ಥಳೀಯ ತಾಂತ್ರಿಕ ಜ್ಞಾನ ಮುಂತಾದ ಗ್ರಾಮೀಣ ಸಹಾಭಾಗಿತ್ವ ಅಧ್ಯಯನದ ಪರಿಕರಗಳನ್ನು ಪ್ರದರ್ಶಿಸಲಾಯಿತು.
ಸಂಪನ್ಮೂಲ ನಕ್ಷೆಯಲ್ಲಿ ಗ್ರಾಮಸ್ಥರು ಗ್ರಾಮದ ಪ್ರಮುಖ ಸ್ಥಳಗಳನ್ನು ಗುರುತಿಸಿದರು. ಪರಿಹಾರ ವೃಕ್ಷದಲ್ಲಿ ಗ್ರಾಮದ ಸಮಸ್ಯೆಗಳು, ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಬಿಂಬಿಸಲಾಗಿತ್ತು. ಬೆಳೆ ಋತುಮಾನ ಚಕ್ರದಲ್ಲಿ ರೈತರು ಬೇರೆ ಬೇರೆ ಋತುಗಳಲ್ಲಿ ತಾವು ಬೆಳೆಯುವ ಬೆಳೆಗಳನ್ನು ಗುರುತಿಸಿದರು. ಸಂಪತ್ತು ಶ್ರೇಣಿ ಯಲ್ಲಿ ತಾವು ಯಾವ ರೈತರ ವರ್ಗಕ್ಕೆ ಸೇರುತ್ತೇವೆ ಎಂಬುವುದನ್ನು ಪ್ರತಿಬಿಂಬಿಸಿದರು.
ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಕೈಗೊಂಡಿತು.
