ರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಪದಾಧಿಕಾರಿಗಳಿಂದ ವಿಶೇಷ ಪೂಜೆ – ಗಣಪತಿ ಸಂಪರ್ಕಕ್ಕೆ ಚಾಲನೆ.

ಸಕಲೇಶಪುರ – ಇಂದು ಬೆಳಗ್ಗೆ ರಾಮಧೂತ ಹಿಂದೂ ಮಹಾಗಣಪತಿಯ ಪದಾಧಿಕಾರಿಗಳು ಗ್ರಾಮ ದೇವತೆ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ 9 ನೇ ವರ್ಷದ ರಾಮಧೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾರ್ಯಕ್ರಮದ ಸಂಪರ್ಕಕ್ಕೆ ಚಾಲನೆ ನೀಡಿದರು.

ಮುಂದಿನ ಆಗಸ್ಟ್ 11 ರಂದು ಮಂಟಪದ ಭೂಮಿ ಪೂಜೆ ಸೇರಿದಂತೆ ಕರಪತ್ರ ಬಿಡುಗಡೆ ಮಾಡಲಿದ್ದು ಆಗಸ್ಟ್ 27 ರಂದು ರಾಮಧೂತ ಹಿಂದೂ ಮಹಾಗಣಪತಿಯನ್ನು ಶ್ರೀ ಗುರುವೇ ಗೌಡ ಕಲ್ಯಾಣ ಮಂಟಪ ಕಮಲ್ ದೇವ್ ಮುಂಭಾಗ ಪ್ರತಿಷ್ಠಾಪನೆ ಮಾಡಲಿದ್ದು. ಆಗಸ್ಟ್ 31 ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಹಾಗೂ ಎಂದು ರಾಮಧೂತ ಹಿಂದೂ ಮಹಾಗಣಪತಿಯ ಸಂಚಾಲಕರಾದ ಪ್ರದೀಪ್ ಪೂಜಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರಘು ಸಕಲೇಶಪುರ ಸೇರಿದಂತೆ ರಾಮಧೂತ ಹಿಂದೂ ಮಹಾಗಣಪತಿ ಸಮಿತಿ ಹಾಗೂ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪದಾಧಿಕಾರಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *