
ಸಕಲೇಶಪುರ. ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಾಳುಪೇಟೆಯ ಜಮ್ಮನಹಳ್ಳಿ, ಗ್ರಾಮದ ಕಡೆಗೆ ಹೋಗುವ ರಸ್ತೆಯಲಿ ದಿನಾಂಕ 31.07.2025 ರಂದು ಗಾಂಜಾಸೊಪ್ಪನ್ನು ಮಾರಾಟ ಮಾಡಲು ಇಬ್ಬರು ಅಪರಿಚಿತರು ಹೊಂಚು ಹಾಕುತ್ತಿದ್ದಾರೆ ಎಂದು ಬಂದ ಮಾಹಿತಿಯ ಮೇರೆಗೆ ಸಕಲೇಶಪುರ ಗ್ರಾಮಾಂತರ ಠಾಣಾ ಮೊ.ನಂ 160/2025 ಕಲಂ 20(ಬಿ) ಎನ್.ಡಿ.ಪಿ.ಎಸ್. ರೀತಾ ಪ್ರಕರಣ ದಾಖಲಾಗಿದ್ದು.
ಸದರಿಯವರುಗಳ ಪತ್ತೆಗಾಗಿ ಮೊಹಮದ್ ಸುಜಿತಾ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ, ಹಾಗೂ ತಮ್ಮಯ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಹಾಸನ, ವೆಂಕಟೇಶನಾಯು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ, ಹಾಸನ ಮತ್ತು ಪ್ರಮೋಧಕುಮಾರ ಆರಕ್ಷಕ ಉಪಾಧೀಕ್ಷಕರು ಸಕಲೇಶಪುರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ನಿರಂಜನ್ ಸಿಪಿಐ, ಸಕಲೇಶಪುರ ಗ್ರಾಮಾಂತರ ವೃತ್ತ ರವರ ಸಾರಥ್ಯದಲ್ಲಿ ತಂಡವನ್ನು ರಚಿಸಿ ಗಾಂಜಾ ಆರೋಪಿಗಳ ಪತ್ತೆಗಾಗಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ, ಪ್ರಸನ್ನ ರವರ ನೇತೃತ್ವದಲ್ಲಿ, ಗುಪ್ತಮಾಹಿತಿ ಸಿಬ್ಬಂದಿಯಾದ ಖಾದರ್ ಆಲಿ ಸಿಹೆಚ್.ಸಿ, 199, ಸಿಪಿಸಿ 556 ಆದಿತ್ಯ ಸಿಪಿಸಿ 68 ರಘು, ಸಿಪಿಸಿ 185 ಶಶಾಂಕ್, ಸಿಪಿಸಿ 183 ಶರತ್, ಸಿಪಿಸಿ 161 ಚೇತನ್ ಹಾಗೂ ಜೀಪಿನ ಚಾಲಕರಾದ ಯೋಗೇಶ ಎಹೆಚ್.ಸಿ. 58 ರವರುಗಳ ಸೇರಿ ಅಪರಾಧ ತಂಡದೊಂದಿಗೆ ಬಾಳುಪೇಟೆಯ ಬನವಾಸೆ ಗಾಳಿಗುಡ್ಡದ ರಸ್ತೆಯಲಿ ದಿನಾಂಕ 31.07.2025 ರಂದು ಬೆಳಿಗ್ಗೆ 11.00 ಗಂಟೆಗೆ ದಾಳಿ ನಡೆಸಿದ್ದು ಸುಮಾರು 36,000 ಸಾವಿರ ಬೆಲೆ ಬಾಳುವ 2.00 ಕೆ.ಜಿ, ಗಾಂಜಾ ಸೊಪ್ಪಿನೊಂದಿಗೆ ಆರೋಪಿಗಳಾದ 1) ಸಂಶುಲ್ ಹಕ್ ಬಿನ್ ಮತಬ್ ಉದ್ದೀನ್, 27 ವರ್ಷ, ಮುಸ್ಲಿಂ ಜನಾಂಗ, ಕೂಲಿಕೆಲಸ, ವಾಸ ವಿರಾಜಪೇಟೆಯ ಚೇಯಂಡಣೆ ಗ್ರಾಮದ ದಯಾ ರವರ ಕಾಫಿ ಎಸ್ಟೇಟ್ ನಲ್ಲಿ ಕೂಲಿಕೆಲಸ, ಸ್ವಂತ ಊರು : ಕಾಸುಮರಿ ಶೋನಾರಿ ಗ್ರಾಮ, ದಲಾಹೋನ್ ಗ್ರಂಥ, ತಾಲೂಕು, ದರಾಂಗ್ ಜಿಲ್ಲೆ, ಅಸ್ಸಾಂ ರಾಜ್ಯ,
2) ಹುರುಮುಜ್ ಆಲಿ ಬಿನ್ ಜಾಮರ್ ಉದ್ದೀನ್, 26 ವರ್ಷ, ಮುಸ್ಲಿಂ ಜನಾಂಗ, ಕೂಲಿಕೆಲಸ, ವಾಸ ವಿರಾಜಪೇಟೆಯ ಚೇಯಂಡಣೆ ಗ್ರಾಮದ ದಯಾ ರವರ ಕಾಫಿ ಎಸ್ಟೇಟ್ ನಲಿ, ಕೆಲಸ, ಸ್ವಂತ ಊರು ಸಿಯಾಲ್ ಮಾರಿಕುತಿ ಗ್ರಾಮ, ದಲಾಹೋನ್ ಗ್ರಂಥ, ತಾಲೂಕು, ದರಾಂಗ್ ಜಿಲ್ಲೆ, ಅಸ್ಸಾಂ ರಾಜ,, ರವರುಗಳನ್ನು ಹಿಡಿಯುವಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸಿನವರು ಯಶಸ್ವಿಯಾಗಿರುತ್ತಾರೆ.
ಇವರುಗಳ ಪತ್ತೆ ಕಾರ್ಯವನ್ನು ಮೆಚ್ಚಿ, ಮಾನ್ಯ ಪೊಲೀಸ್ ಅಧೀಕ್ಷಕರು ಶಾಘಿಸಿರುತ್ತಾರೆ.
