ಸಕಲೇಶಪುರ. ತಾಲ್ಲೂಕಿನ ಗರಿಮೆ ಮತ್ತು ಹೆಮ್ಮೆ ಆಗಿರುವ ವೀರಯೋಧ ಎಕೆ ಸಾಗರ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಸ್ಮಾರಕ ಕಟ್ಟಡದ ಪ್ರದೇಶದಲ್ಲಿ ಇತ್ತೀಚೆಗೆ ಕೆಲವರು ವ್ಯಾಪಾರ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧನ ಸ್ಮಾರಕದ ಮೇಲೆ ಇತರೆ ವ್ಯಕ್ತಿಗಳು ವ್ಯಾಪಾರ ಮಾಡಿ ಆ ಒಂದು ಪವಿತ್ರ ಸ್ಥಳಕ್ಕೆ ದಕ್ಕೆ ಹಾಗೂ ತಮ್ಮ ಸ್ವಾರ್ಥ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿರುವುದರ ಹಿಂದೆ ಪುರಸಭೆ ಅಧಿಕಾರಿಗಳ ಮೌನ ವಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ.

ಇದು ನೈತಿಕತೆಯ ಮೀರಿದ ನಡೆ ಆಗಿದ್ದು, ಸಾಗರ್ ಅವರ ಬಲಿದಾನ ಹಾಗೂ ವೀರ ಯೋಧರ ಗೌರವಕ್ಕೆ ಕಪ್ಪು ಮಸಿ ಇಡುವಂತೆ ಆಗಿದೆ.ಈ ಬಗ್ಗೆ ನಮ್ಮ ಸಂಘಟನೆ ವತಿಯಿಂದ ನಿಮ್ಮ ಬಳಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರಾವೇ ಪ್ರವೀಣ್ ಶೆಟ್ಟಿ ಬಣದಿಂದ ಮನವಿ ಸಲ್ಲಿಸಲಾಯಿತು.

1. ಸಾಗರ್ ಸ್ಮಾರಕ ಪ್ರದೇಶದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ಅಥವಾ ಗುತ್ತಿಗೆ ವ್ಯವಸ್ಥೆ ರದ್ದುಗೊಳಿಸಬೇಕು.

2. ಆ ಸ್ಥಳವನ್ನು ಶುದ್ಧವಾಗಿ ಸ್ಮಾರಕವಾಗಿ ಉಳಿಸಿ, ಮುಂದಿನ ಪೀಳಿಗೆಗೆ ವೀರಯೋಧನ ಬಲಿದಾನದ ಬಗ್ಗೆ, ತಿಳಿಸುವಂತಹ ಶಿಲಾಶಾಸನ ಅಥವಾ ಫಲಕವನ್ನು ಅಳವಡಿಸಬೇಕು.

3. ಇಂತಹ ಅವಮಾನಕಾರಿ ಘಟನೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು.

ಇದು ಸಕಲೇಶಪುರದ ಜನರ ಹಿತ ಮತ್ತು ವೀರ ಯೋಧನ ಗೌರವ ರಕ್ಷಣೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿರುವುದರಿಂದ. ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರಾವೇ ಪ್ರವೀಣ್ ಶೆಟ್ಟಿ ಬಣದಿಂದ ಮನವಿ ಸಲ್ಲಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *