
ಆಲೂರು : ಬೋವಿ ಸಮಾಜದ ಮಾಜಿ ರಾಜ್ಯಧ್ಯಕ್ಷರಾದ ಸೀತಾರಾಮನ್ ಫೋನ್ ಸಂಭಾಷಣೆ ವೇಳೆ ಒಕ್ಕಲಿಗ ಸಮುದಾಯ ಜನಾಂಗಕ್ಕೆ ಅವಮಾನಕರ ರೀತಿಯಲ್ಲಿ ಮಾತಾನಾಡಿ ನಿಂದಿಸಿದ್ದು ಇದು ನಮ್ಮ ಸಮುದಾಯಕ್ಕೆ ಅಗೌರವ ತಂದಿದೆ ಎಂದು ಸೀತಾರಾಮನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ಹೆಮ್ಮಿಗೆ ಮೋಹನ್ ಮಾತಾನಾಡಿ ಮೈಸೂರ್ ಜಿಲ್ಲೆಯ ನಿವಾಸಿಯಾದ ಸೀತಾ ರಾಮನ್ ರವರು ಅವಾಚ್ಯ ಶಬ್ದಗಳನ್ನು ಬಳಸಿ ಒಕ್ಕಲಿಗ ಸಮುದಾಯವನ್ನು ನಿಂದನೆ ಮಾಡಿರುವುದು ಖಂಡನೀಯ ಒಂದು ಬಲಿಷ್ಠ ಸಮುದಾಯಕ್ಕೆ ಅ ಗೌರವ ತಂದಿರುವ ಇಡೀ ಸಮುದಾಯವೆ ಖಂಡಿಸಿದ್ದು ಜಾತಿ ನಿಂದನೆಯ ಆರೋಪದಡಿಯಲ್ಲಿ ಸೀತಾ ರಾಮನ್ ರವರನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೆ ಎಸ್ ಮಂಜೇಗೌಡ ಮಾತಾನಾಡಿ ಸೀತಾ ರಾಮನ್ ಎಂಬ ವ್ಯಕ್ತಿ ಒಕ್ಕಲಿಗ ಸಮುದಾಯದ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದು ಇದು ನಮ್ಮ ಸಮುದಾಯಕ್ಕೆ ದಕ್ಕೆ ಉಂಟುಮಾಡಿದಲ್ಲದೆ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿರುತ್ತಾರೆ ಹಾಗಾಗಿ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಅವಮಾನ ಮಾಡಿ ಸಮಾಜದ ಸ್ವಚ್ಛ ಹಾಳಾಗಲು ದಾರಿಯಾಗಿರುವ ಸೀತಾರಾಮನ್ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಇಲ್ಲ ಗಡಿ ಪಾರು ಮಾಡಬೇಕೆಂದು ಆಗ್ರಹಿಸಿದರು..
ಈ ಸಂದರ್ಭದಲ್ಲಿ ಒಕ್ಕಲಿಗೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳಿದ್ದರು..
