
ಹಾಸನ : ನಗರದ ಬಿ,ಕಾಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಲ್ಲಿ *”ಹುತಾತ್ಮ ರೈತರ ಸ್ಮರಣಾರ್ಥ ಪ್ರಯುಕ್ತ ಮೊದಲು ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ರೋಟರಿ ಕ್ಲಬ್ ನ ಅಧ್ಯಕ್ಷರಾದ H.D.ವಜ್ರಕುಮಾರ್ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೆ.ಕೆ ಮೋಹನ್ ಕುಮಾರ್ ರವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢ ಶಿಕ್ಷಣ ಮಂಡಳಿಯ ಉಪನಿರ್ದೇಶಕರಾದ ಚಂದ್ರಶೇಖರ್” ರವರು ನೆರವೇರಿಸಿ, ಉದ್ಘಾಟನಾ ಭಾಷಣವನ್ನು ಮಾಡಿದರು.
ಅವರೊಂದಿಗೆ ಹಾಸನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ “ಕೆ.ರಂಗನಾಥ” ರವರು ಉದ್ಘಾಟನೆಗೆ ಕೈ ಜೋಡಿಸಿದರು.
ರೋಟರಿ ಜಿಲ್ಲೆ 3182 ವಲಯ 9 ರ ಅಸಿಸ್ಟೆಂಟ್ ಗವರ್ನರ್ ಆದ “ರೋ!! ಜೆ.ಎನ್ ಮಂಜುನಾಥ್” ರವರ ಘನ ಉಪಸ್ಥಿತಿಯಲ್ಲಿ, ಕಾರ್ಯಕ್ರಮ ಮುಂದುವರೆದು, ಅತಿಥಿಗಳಾದ J.N ಮಂಜುನಾಥ್ ರವರು, ಲಲಿತ್ ಕುಮಾರ್ ರವರು, ಭರತ್ ಕುಮಾರ್, ರವರು ಕಾರ್ಯಕ್ರಮದ ಬಗ್ಗೆ ತಮ್ಮ ಹಿತ ನುಡಿಗಳನ್ನು ನುಡಿದರು.
ನಂತರ ರೈತಗೀತೆ ಯೊಂದಿಗೆ ಆರು ಜನ ರೈತರುಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ನಂತರ ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಲಾಯಿತು.
ನಂತರ ಕಾರ್ಯಕ್ರಮದ ಅಧ್ಯಕ್ಷರಾದ ದಾಕ್ಷಾಯಿಣಿ ಮೇಡಂ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಕೊನೆಯಲ್ಲಿ ವಂದನಾರ್ಪಣೆಯನ್ನು ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ಕೆ.ಎಸ್.ಯೋಗೇಶ್ ರವರು ನಡೆಸಿಕೊಟ್ಟರು.
ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿಯಾದ ನಾಗವೇಣಿ ರವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ದೀಪು ಮೇಡಮ್ ರವರು, ಬೊಮ್ಮೇಗೌಡ ರವರು, ಹರೀಶ್ ರವರು, ಲಲಿತ್ ಕುಮಾರ್ ರವರು, ಉದಯಶಂಕರ್ ರವರು, ಭರತ್ ಕುಮಾರ್ ರವರು, ಇತರೆ ಗಣ್ಯರು ಹಾಜರಿದ್ದರು.
ಸಭಾ ಕಾರ್ಯಕ್ರಮದ ನಂತರ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ಕೊಡಲಾಯಿತು.
ರಕ್ತದಾನದಲ್ಲಿ ಸುಮಾರು 20 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನವನ್ನು ಮಾಡಿದರು. ಸುಮಾರು 300ಕ್ಕೂ ಹೆಚ್ಚು ಜನ ಮತ್ತು ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ಆಗಮಿಸಿ ಸದರಿ ಕಾರ್ಯಕ್ರಮ ಯಶಸ್ವಿಯಗಲು ಕಾರಣಕರ್ತರಾದ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ಇಂತಿ,ಅಧ್ಯಕ್ಷರು/ಕಾರ್ಯದರ್ಶಿಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು,ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್,ಹಾಸನ.





